ಮೈಸೂರು

ಟೈರ್ ಸಿಡಿದು ಮಿನಿ ವಿಧಾನ ಸೌಧದಲ್ಲಿ ಬೆಂಕಿ

ಮೈಸೂರು,ಜು.23:- ಜೀಪೊಂದರ ಹಳೆಯ ಟೈರ್ ಸಿಡಿದು ಮಿನಿ ವಿಧಾನ ಸೌಧದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮಿನಿ ವಿಧಾನ ಸೌಧದ ವಾಹನಗಳು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಘಟನೆ ನಡೆದಿದ್ದು, ಮಿನಿ ವಿಧಾನ ಸೌಧದ ತಹಶೀಲ್ದಾರ್ ರ ಹಳೆಯ ಜೀಪು ಹಾಗೂ ಮೂರು ತ್ರಿಚಕ್ರವಾಹನಗಳು ಸುಟ್ಟು ಕರಕಲಾಗಿವೆ. ವಿಷಯಗಳ ತಿಳಿಯುತ್ತಿದ್ದಂತೆ ಅಗ್ನಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಹಾಜರಾಗಿದ್ದು, ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಇದರಿಂದ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ತಿಳಿದು ಸ್ಥಳದಲ್ಲಿ ಸಾವಿರಾರು ಜನರು  ಜಮಾಯಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: