ಮೈಸೂರು

ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ವೆಲ್ಡಿಂಗ್ ವೃತ್ತಿ ನಡೆಸುತ್ತಿದ್ದ ಮೇಟಗಳ್ಳಿ ನಿವಾಸಿಯಾಗಿರುವ ನಾಗರಾಜು(ಬಸವರಾಜು) ಎಂಬವರ ಎರಡೂ ಮೂತ್ರಪಿಂಡಗಳು ಸಂಪೂರ್ಣವಾಗಿ ವೈಫಲ್ಯವಾಗಿದ್ದು, ಚಿಕಿತ್ಸೆಗೆ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಮಂಚೇಗೌಡನಕೊಪ್ಪಲಿನ ಕಿಡಗಣ್ಣಮ್ಮ ಬಡಾವಣೆಯಲ್ಲಿ ಬಾಡಿಕೆ ಮನೆಯಲ್ಲಿ ಪತ್ನಿ ಮತ್ತು 7 ವರ್ಷದ ಹೆಣ್ಣುಮಗಳ ಜೊತೆ ವಾಸಿಸುತ್ತಿದ್ದ ನಾಗರಾಜು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆಯಿದೆ. ಅನಾರೋಗ್ಯದಿಂದ ಯಾವುದೇ ಕೆಲಸ ಮಾಡಲಾಗದೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ಚಿಕಿತ್ಸೆಗೂ ಹಣ ಬೇಕಾಗಿದೆ. ಸಹಾಯ ಮಾಡಲು ಇಚ್ಛಿಸುವವರು ನಾಗರಾಜು ಬಿ. ಮೊಬೈಲ್ ಸಂಖ್ಯೆ: 9945032904, 8970693522 ಅನ್ನು ಸಂಪರ್ಕಿಸಬಹುದು.

ಬ್ಯಾಂಕ್ ಖಾತೆ ಮಾಹಿತಿ: ಇಂಡಿಯನ್ ಓವರ್‍ಸೀಸ್ ಬ್ಯಾಂಕ್, ಹೆಬ್ಬಾಳ್ ಶಾಖೆ- 256601000000275, ಐಎಫ್‍ಎಸ್‍ಸಿ ಕೋಡ್- IOBA 0002566.

Leave a Reply

comments

Related Articles

error: