ಮನರಂಜನೆ

ಎರಡು ದಿನಗಳಲ್ಲಿ `ಧಡಕ್’ ಕಲೆಕ್ಷನ್ ಎಷ್ಟು.?

ಮುಂಬೈ,ಜು.23-ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯಿಸಿರುವ ಮೊದಲ ಸಿನಿಮಾ `ಧಡಕ್’ ದೇಶದಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದ್ದರೂ ‘ಧಡಕ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಿದೆ. ಚಿತ್ರ ಬಿಡುಗಡೆ ಆದ ಮೊದಲನೇ ದಿನ (ಶುಕ್ರವಾರ) 8.71 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡನೇ ದಿನ (ಶನಿವಾರ) 11.04 ಕೋಟಿ ರೂ. ಕಮಾಯಿ ಮಾಡಿದೆ. ಒಟ್ಟಾರೆ ಎರಡು ದಿನಗಳಲ್ಲಿ ‘ಧಡಕ್’ ಸಿನಿಮಾ 19.75 ಕೋಟಿ ರೂ. ಕೊಳ್ಳೆ ಹೊಡೆದಿದೆ.

ಜಾಹ್ನವಿ ಹಾಗೂ ಇಶಾನ್ ಇಬ್ಬರೂ ಹೊಸಬರೇ. ಹೀಗಿರುವಾಗ, ‘ಧಡಕ್’ ಎರಡು ದಿನಗಳಲ್ಲೇ ಹತ್ತತ್ರ ಇಪ್ಪತ್ತು ಕೋಟಿ ರೂ. ಕಲೆಕ್ಷನ್ ಮಾಡಿದೆ ಅಂದ್ರೆ ಸುಮ್ನೆ ಅಲ್ಲ. ಅಮ್ಮನಂತೆ ತಾರೆ ಆಗಬೇಕು ಅಂತ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಜಾಹ್ನವಿ ಕಪೂರ್ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಆಗಿದ್ದಾರೆ. (ಎಂ.ಎನ್)

Leave a Reply

comments

Related Articles

error: