
ಮೈಸೂರು
ಸಂಸ್ಥೆ ಬೆಳೆಯಲು ಹೊಂದಾಣಿಕೆ ಅಗತ್ಯ : ಡಿ.ವಿ.ಪ್ರಸಾದ್
ಮೈಸೂರು ಪೇಯಿಂಟ್ಸ್ ಪ್ರಧಾನಮಂತ್ರಿಯವರು ನೋಟು ಅಮಾನ್ಯಗೊಳಿಸಿದ ನಂತರ ದೇಶವ್ಯಾಪಿ ಬೇಡಿಕೆಯೊಂದಿಗೆ ಪ್ರಸಿದ್ಧಿ ಪಡೆದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್ ತಿಳಿಸಿದರು.
ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಡೆಟ್ ವತಿಯಿಂದ ಖಾಸಗಿ ಹೋಟೆಲ್ನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಡಿ.ವಿ.ಪ್ರಸಾದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನೋಟು ಅಮಾನ್ಯದಿಂದ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿರುವ ಮೈಸೂರು ಪೇಯಿಂಟ್ಸ್ ಗೆ ಮುಂದೆ ಸ್ಪರ್ಧೆ ಹೆಚ್ಚಾಗಲಿದೆ. ಯಾಕೆಂದರೆ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ 2500ಸಾವಿರಕೋಟಿ ರೂ.ವೆಚ್ಚದಲ್ಲಿ ಏಷಿಯನ್ ಪೇಂಟ್ಸ್ ಸ್ಥಾಪನೆಯಾಗುತ್ತಿದೆ. ಅದಕ್ಕೆ ನಾವು ಯಾವುದೇ ರೀತಿಯಲ್ಲೂ ಸ್ಪರ್ಧೆ ನೀಡಲು ಸಾಧ್ಯವಾಗುತ್ತಿಲ್ಲ. ಶಾಹಿಯೇ ಪ್ರಮುಖ ಉತ್ಪಾದನೆಯಾಗಬಾರದು. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಶಾಹಿಯನ್ನು ರದ್ದು ಮಾಡಬಹುದು ಒಂದು ಸಂಸ್ಥೆ ಬೆಳೆಯಲು ಹೊಂದಾಣಿಕೆ ಅಗತ್ಯ ಎಂದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಕಂಪನಿಯ ಮಾಜಿ ಅಧ್ಯಕ್ಷರು, ಮಾಜಿ ವ್ಯವಸ್ಥಾಪಕ ನಿರ್ದೇಶಕರುಗಳಿಂದ ಸಲಹೆ, ಸಂವಹನ ಹಾಗೂ ವಿಚಾರ ವಿನಿಮಯ ನಡೆಯಿತು.
ಕಾರ್ಯಕ್ರಮದಲ್ಲಿ ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಮಾಜಿ ಅಧ್ಯಕ್ಷ ಎ.ಸಿ ಲಕ್ಷ್ಮಣ ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.