ದೇಶಪ್ರಮುಖ ಸುದ್ದಿ

ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ವಿಷಯ: ತೆಲುಗು ದೇಸಂ ಸಂಸದರಿಂದ ಇಂದೂ ಧರಣಿ

ನವದೆಹಲಿ (ಜುಲೈ 23): ಅವಿಶ್ವಾನ ನಿರ್ಣಯದ ಮೇಲಿನ ಚರ್ಚೆ, ಮತದಾನದ ಬಳಿಕ ರಾಜ್ಯಸಭೆ ಮತ್ತು ಲೋಕಸಭೆ ಕಲಾಪ ಸೋಮವಾರ ಪುನಃ ಆರಂಭವಾಗಿದೆ. ಟಿಡಿಪಿ ಸಂಸದರು ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.

ಸೋಮವಾರ ಕಲಾಪ ಆರಂಭಗೊಂಡಾಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡನೆ ಮಾಡಿದ್ದ ಅವಿಶ್ವಾಸ ನಿರ್ಣಯವನ್ನು ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿರ್ಣಯ ಮಂಡಿಸಿ, ಪರವಿರುವವರು ಎಸ್ ಎಂದು, ವಿರುದ್ಧ ಇರುವವರು ನೋ ಎಂದು ಹೇಳುವಂತೆ ಸೂಚಿಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಇಂದು ಸಹ ಟಿಡಿಪಿ ಸಂಸದರು ಒತ್ತಾಯಿಸಿದರು. ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಸಂಸದರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಶುಕ್ರವಾರ ಇದೇ ವಿಷಯವಾಗಿ ಟಿಡಿಪಿ ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ 12 ಗಂಟೆಗಳ ಕಾಲ ಚರ್ಚೆ ನಡೆದು ಭಾರೀ ವಾಗ್ವಾದಕ್ಕೆ ಕಾರಣವಾಗಿತ್ತು. ನಂತರ ಮತದಾನವಾದಾಗ ನಡೆದು ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು. (ಎನ್.ಬಿ)

Leave a Reply

comments

Related Articles

error: