ಮೈಸೂರು

ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ : 10 ಸಾವಿರ ಮಂದಿಯಿಂದ ನೋಂದಣಿ

ಮೈಸೂರು,ಜು.24:- ಮೈಸೂರಿನಲ್ಲಿ ಜನಪ್ರಿಯ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಯೋಜನೆಯ ಅಧಿಕೃತ ಚಂದಾದಾರರಾಗಿ ಈವರೆಗೆ 10 ಸಾವಿರ ಮಂದಿ ನೋಂದಣಿ ಮಾಡಿಸಿದ್ದಾರೆ.

ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆಯಾಗಿರುವ ಮೈಸೂರಿನ ಟ್ರಿಣ್ ಟ್ರಿಣ್ ದಿನೇ ದಿನೇ ಮತ್ತಷ್ಟು ಜನಪ್ರಿಯ ವಾಗುತ್ತಿದ್ದು,  ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆದಾರರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಕಳೆದ 2017 ಜೂನ್ 4ರಂದು ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಚಾಲನೆಗೊಂಡಿತ್ತು.  ಕಳೆದ ಶುಕ್ರವಾರದ ವೇಳೆಗೆ ಒಟ್ಟು 10 ಸಾವಿರ ಸದಸ್ಯರು ಹೆಸರು ನೋಂದಣಿಯಾಗಿದ್ದು,ತಿಂಗಳಿಗೆ ಸರಾಸರಿ 300 ರಿಂದ 500 ಮಂದಿಯಿಂದ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಮೈಸೂರು ನಗರದಾದ್ಯಂತ ಒಟ್ಟು 52 ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಿದ್ದು, ಪ್ರತಿನಿತ್ಯ ಸರಾಸರಿ 800 ರಿಂದ 1000 ಮಂದಿ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಬಳಕೆ ಮಾಡುತ್ತಿದ್ದಾರೆ, ಒಟ್ಟು 12 ಕಡೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ, ಸೈಕಲ್ ಸವಾರಿ ನಮ್ಮ ಹೆಮ್ಮೆಯ ಸವಾರಿ ಎನ್ನುತ್ತಿದ್ದಾರಂತೆ ಚಂದಾದಾರರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: