ಸುದ್ದಿ ಸಂಕ್ಷಿಪ್ತ

ಅಂಚೆ ಕಚೇರಿಯ ಸ್ಥಳಾಂತರ

ಮೈಸೂರು,ಜು.24-ಗೋಕುಲಂ ಅಂಚೆ ಕಚೇರಿಯು ಸ್ಥಳಾಂತರವಾಗಿದ್ದು,  ಜು.16 ರಿಂದ ಗೋಕುಲಂ ಅಂಚೆ ಕಚೇರಿಯು ನಂ. 159, 9ನೇ ತಿರುವು, ಗೋಕುಲಂ 3ನೇ ಹಂತ, ಮೈಸೂರು ಇಲ್ಲಿ ಕಾರ್ಯನಿರ್ವಹಿಸುತ್ತದೆ.

ಅದೇ ರೀತಿ ಸಿದ್ದಾರ್ಥನಗರ ಅಂಚೆ ಕಚೇರಿಯು ಸ್ಥಳಾಂತರವಾಗಿದ್ದು, ಜು.16 ರಿಂದ ಅಂಚೆ ಕಚೇರಿಯು ನಂ. 385, ನೀತಿ ಮಾರ್ಗ, ಸಿದ್ದಾರ್ಥನಗರ ಮೈಸೂರು ಇಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: