ಕರ್ನಾಟಕಪ್ರಮುಖ ಸುದ್ದಿ

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾಸನ (ಜುಲೈ 24): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ಹಾಸನ ಇವರ ವತಿಯಿಂದ 2018-19ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಈ ಕೆಳಕಂಡ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನಗಳ ಸೌಲಭ್ಯಗಳನ್ನು ನೀಡಲು ಆನ್‍ಲೈನ್‍ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಸ್ವಯಂ ಉದ್ಯೋಗ ಯೋಜನೆ (ಬ್ಯಾಂಕ್ ಸಹಯೋಗದೊಂದಿಗೆ): ರೂ.50,000/-ಗಳಿಂದ ಗರಿಷ್ಠ ರೂ.10.00 ಲಕ್ಷದವರೆವಿಗೂ ಸಾಲ ಹಾಗೂ ಸಹಾಯಧನ ನೀಡಲಾಗುವುದು. (ಕನಿಷ್ಠ 25,000/- ಗಳಿಂದ ಗರಿಷ್ಠ 2.00 ಲಕ್ಷದವರೆಗೆ ಸಹಾಯಧನ). ಗಂಗಾ ಕಲ್ಯಾಣ ನೀರಾವರಿ ಯೋಜನೆ: ರೈತರಿಗೆ ಉಚಿತವಾಗಿ ರೂ. 2 ಲಕ್ಷಗಳ ವೆಚ್ಚದಲ್ಲಿ ಕೊಳೆವೆ ಬಾವಿ ಕೊರೆಯಲಾಗುವುದು.

ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ: ರೂ.10,000 ಗಳಿಂದ ವ್ಯಾಸಾಂಗಕ್ಕೆ ಅನುಗುಣವಾಗಿ 3,50,000 ಗಳ ವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಸಾಲಕ್ಕೆ ಶೇ 2% ರಂತೆ ಸೇವಾ ಶುಲ್ಕ ಪಡೆಯಲಾಗುವುದು. ಆನ್‍ಲೈನ ಮುಖೇನ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. www.kmdc.kar.nic.in/arivu2

ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆ:

ಈ ಯೋಜನೆಯಡಿಯಲ್ಲಿ ರೂ.25,000/- ಹಾಗೂ 50,000 ಗಳಿಗೆ ಶೇ 50 ರಷ್ಟು ಸಾಲ ಹಾಗೂ ಶೇ 50 ರಷ್ಟು ಸಹಾಯಧನವನ್ನು ಕಲ್ಪಿಸಲಾಗುತ್ತಿದೆ.
ಮೈಕ್ರೋಲೋನ್ ಯೋಜನೆ(ಸ್ವಸಹಾಯ ಗುಂಪುಗಳಿಗೆ): ಈ ಯೋಜನೆಯಡಿಯಲ್ಲಿ ರೂ.10,000 ಗಳನ್ನು ಪ್ರತಿ ಸದಸ್ಯರಿಗೆ ಸ್ವಸಹಾಯ ಸಂಘದ ಮುಖೇನ ಸಾಲ ನೀಡಲಾಗುವುದು. ರೂ.5,000 ಗಳು ಸಾಲ ಹಾಗೂ ರೂ.5,000 ಗಳು ಸಹಾಯಧನವಾಗಿರುತ್ತದೆ.

ಪಶು ಸಂಗೋಪನಾ ಯೋಜನೆ:

(ಗ್ರಾಮೀಣ ಪ್ರದೇಶದ ಮಹಿಳೆಯರಿಗೆ) ಈ ಯೋಜನೆಯಡಿ ರೂ. 40,000 ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯನ ನೀಡಲಾಗುವುದು. ಒಟ್ಟು ಘಟಕ ವೆಚ್ಚದ ಮೊತ್ತದಲ್ಲಿ ಶೇ. 50 ರಷ್ಟು ಸಹಾಯಧನವಾಗಿರುತ್ತದೆ. (ಹಸು, ಎಮ್ಮೆ, ಕುರಿ, ಇತರೆ).

ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ: ಈ ಯೋಜನೆಯಡಿ ರೂ. 1 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು. ರೂ. 50,000 ಸಾಲ ಹಾಗೂ ರೂ. 50,000/- ಗಳು ಸಹಾಯಧನವಾಗಿರುತ್ತದೆ (ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು ಇತ್ಯಾದಿ).

ಅಲ್ಪಸಂಖ್ಯಾತರ ಟ್ಯಾಕ್ಸಿ ಕಲ್ಯಾಣ ಯೋಜನೆ:

ಈ ಯೋಜನೆಯಡಿ 3 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಖರೀದಿಸುವ ವಾಹನದ ಮೌಲ್ಯ ಕನಿಷ್ಠ ರೂ.4 ಲಕ್ಷಗಳಿಂದ 7.50 ಲಕ್ಷಗಳಾಗಿರತಕ್ಕದ್ದು(ತೆರಿಗೆ ಹೊರತುಪಡಿಸಿ). ಗೃಹ ನಿರ್ಮಾಣ ಮೇಲಿನ ಬಡ್ಡಿ ಸಹಾಯಧನ ಯೋಜನೆ: (ಕ್ರಿಶ್ಚಿಯನ್ ಸಮುದಾಯದ ಜನಾಂಗದವರಿಗೆ ಮಾತ್ರ) (CDP) ಈ ಯೋಜನೆಯಡಿ ಬ್ಯಾಂಕ್ ನಿಂದ 5 ಲಕ್ಷದವರೆಗೆ ಸಾಲ ಪಡೆದು ರೂ. 1.00 ಲಕ್ಷ ಗಳವರೆಗೆ ಬಡ್ಡಿ ಪಾವತಿಸಿದವರಿಗೆ ಸಹಾಯಧನ ರೂಪದಲ್ಲಿ ನೀಡಲಾಗುವುದು.

ಕೃಷಿ ಭೂಮಿ ಖರೀದಿ ಯೋಜನೆ:

01 ಎಕರೆ ತರಿ ಅಥವಾ 02 ಎಕರೆ ಖುಷ್ಕಿ ಭೂಮಿಯನ್ನು ಖರೀದಿಸಲು ರೂ.10,00 ಲಕ್ಷದವರೆಗೆ ಶೇ.6ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇದರಲ್ಲಿ ಶೇ.50 ರಷ್ಟು ಸಹಾಯಧನವಾಗಿರುತ್ತದೆ. ಆಟೋಮೊಬೈಲ್ ಸರ್ವೀಸ್ ತರಭೇತಿ ಹಾಗೂ ಸಾಲ ಯೋಜನೆ: ಈ ಯೋಜನೆಯಲ್ಲಿ ರಾಷ್ಟ್ರೀಯ ಬ್ಯಾಂಕ್ ಸಹಯೋಗದೊಂದಿಗೆ ರೂ. 2 ಲಕ್ಷಗಳಿಂದ ರೂ.5 ಲಕ್ಷದವರೆವಿಗೂ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು.

ಪ್ರವಾಸಿ ಸಾಲ ಯೋಜನೆ (ಕೇರಳ ಮಾದರಿ):

ಈ ಯೋಜನೆಯಡಿ ಕೊಲ್ಯಾಟಿಕಲ್ ಭದ್ರತೆ ಆದಾರದಲ್ಲಿ ಗರಿಷ್ಠ ರೂ. 10 ಲಕ್ಷಗಳವರೆಗೆ ಸಾಲವನ್ನು ಶೇ.5 ರ ಬಡ್ಡಿ ದರದಲ್ಲಿ ನೀಡಲಾಗುವುದು. ಮನೆ ಮಳಿಗೆ ಯೋಜನೆಯಡಿ ಕೋಮು ಗಲಭೆ/ಕೋಮು ಹಿಂಸಾಚಾರ ಸಂಧರ್ಭದಲ್ಲಿ ಹಾಗೂ ಪರಿಸರ ವಿಕೋಪದಿಂದಾಗಿ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾತರಿಗೆ, ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ಖೈದಿಗಳಿಗೆ , ಭಯೋತ್ಪಾದಕ ವಿರೋದಿ ಚಟುವಟಿಕೆಗಳಿಗೆ, ಗೂಂಡಾ ಕಾಯಿದೆಯಡಿ ಬಂದಿತರಾಗಿ ಪ್ರಕರಣಗಳು ಸಾಭೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ಅಲ್ಪಸಂಖ್ಯಾತ ನಿರಪರಾದಿಗಳಿಗೆ ಹಾಗೂ ವಿವಿಧ ಸುರಕ್ಷಿತ ಕಾಯಿದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಗೊಂಡ ಅಲ್ಪಸಂಖ್ಯಾತ ನಿರಪರಾದಿಗಳಿಗೆ ಪುನರ್ವಸತಿಗಾಗಿ ಶೇ.3ರ ಬಡ್ಡಿದರದಲ್ಲಿ ರೂ. ಗರಿಷ್ಠ 5 ಲಕ್ಷಗಳ ಸಾಲ ಸೌಲಭ್ಯ ಇದರಲ್ಲಿ ಶೇ.50ರಷ್ಟು ಸಹಾಯಧನವಾಗಿರುತ್ತದೆ. ಈ ಯೋಜನೆಯಡಿ ಲಾಭ ಪಡೆಯಲು ವಾರ್ಷಿಕ ಆದಾಯ ರೂ. 6 ಲಕ್ಷದೊಳಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ (ನಿ) ಮೌಲಾನಾ ಆಜಾದ್ ಭವನ, 1ನೇ ಮಹಡಿ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಶ್ರೀ ವಿದ್ಯಾ ಗಣಪತಿ ಅಡ್ಡರಸ್ತೆ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ, ಹಾಸನ-573202 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಮೇಲಿನ ಎಲ್ಲಾ ಯೋಜನೆಗಳನ್ನು ಆನಲೈನ್ ನೋಂದಣಿ (Registration) ಮಾಡಿದ ಮೇಲೆ ಪ್ರಿಂಟೌಟ್ (Print out) ತೆಗೆದು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಖುದ್ದಾಗಿ ಸಲ್ಲಿಸುವುದು. ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ 31.08.2018 ಆಗಿರುತ್ತದೆ. ಕಚೇರಿ ದೂರವಾಣಿ ಸಂಖ್ಯೆ: 08172-246333, www.kmdc.kar.nic.in /loan/login.aspx ಅನ್ನು ಸಂಪರ್ಕಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಬಿ.ಎನ್ ನಾಗೇಂದ್ರ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: