ಮೈಸೂರು

ಕೆ ಆರ್ ನರ್ಸಿಂಗ್ ಹಾಸ್ಟೆಲ್ ಗೆ ಮತ್ತೆ ಅದೇ ಸೈಕೋ ಬಂದಿದ್ದನೆಂದು ವಿದ್ಯಾರ್ಥಿನಿಯರ ಗಲಾಟೆ : ಭದ್ರತೆ ಒದಗಿಸುವಂತೆ ಪೋಷಕರ ಒತ್ತಾಯ

ಮೈಸೂರು,ಜು.24:- ಕೆ ಆರ್ ನರ್ಸಿಂಗ್ ಹಾಸ್ಟೆಲ್ ಗೆ ಮತ್ತೆ ಅದೇ ಸೈಕೋ ಬಂದಿದ್ದ ಎಂದು  ವಿದ್ಯಾರ್ಥಿನಿಯರು ಗಲಾಟೆ ನಡೆಸಿದ್ದಾರೆ.

ದೇವರಾಜ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಚೀರಾಟ ರಂಪಾಟ ನಡೆಸಿದ್ದು, ಇಂದು ಬೆಳಿಗ್ಗೆ ಶಾಸಕ ಎಲ್ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿದ್ದರು. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರೂ ಪೋಲಿಸರ ಮಾತಿಗೆ ಕಿಮ್ಮತ್ತು ನೀಡದೇ ರಕ್ಷಣೆ ಕೊಡಿ ಎಂದು ವಿದ್ಯಾರ್ಥಿನಿಯರು ಕೂಗಾಡಿದರು. ನಾಲ್ಕು ದಿನಗಳಿಂದ ನಿತ್ಯ ಇದೇ ರೀತಿ ಘಟನೆ ನಡೆಯುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲವೆಂದು ರಂಪಾಟ ನಡೆಸಿದರು.ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನರ್ಸಿಂಗ್ ಹಾಸ್ಟೆಲ್ಗೆ ಸೈಕೋ ನುಗ್ಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯೊಂದಿಗೆ ಪೋಷಕರು ಸಭೆ ನಡೆಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಆಗುತ್ತಿರುವ ತೊಂದರೆಯ ಕುರಿತು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕೆ.ಆರ್ ಮೆಡಿಕಲ್‌ ಕಾಲೇಜಿನಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪ್ರಾಂಶುಪಾಲರು  ಹಾಗೂ ಆಡಳಿತ ಮಂಡಳಿಯ ನಡೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳಿಗೆ ರಕ್ಷಣೆ ನೀಡುವಂತೆ ಪೋಷಕರು ಒತ್ತಾಯಿಸಿದ್ದು, ಹಾಸ್ಟೆಲ್ ನಲ್ಲಿರುವ ಸಮಸ್ಯೆ ನಿವಾರಿಸುವಂತೆ ಕೇಳಿಕೊಂಡಿದ್ದಾರೆ.ಹಾಸ್ಟೆಲ್ಗೆ ಭದ್ರತೆ ನೀಡವಂತೆ ಪೋಷಕರ ಒತ್ತಾಯಿಸಿದ್ದು, ಹಾಸ್ಟೆಲ್ಗೆ ಸೈಕೋ ಕಾಮಿ ನುಗ್ಗಿದ್ದ ವಿಚಾರವನ್ನು ಪೋಷಕರುಗಳಿಗೆ ತಿಳಿಸಿಲ್ಲವೆಂದು ಆಡಳಿತ ಮಂಡಳಿ ವಿರುದ್ಧ ಪೋಷಕರು ಗರಂ ಆಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: