ಮನರಂಜನೆ

ಮರಾಠಿ ಬಿಗ್ ಬಾಸ್ ಶೋನ ವಿಜೇತರಾದ ಮೇಘ ಧಾಡೆ

ಮುಂಬೈ,ಜು.24-ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಇದೀಗ ಮರಾಠಿಯ ಮೊದಲ ಆವೃತ್ತಿಯ ಬಿಗ್ ಬಾಸ್ ಶೋ ನಲ್ಲಿ ಮೇಘ ಧಾಡೆ ವಿಜೇರಾಗಿದ್ದಾರೆ.

ಮೊದಲ ಆವೃತ್ತಿಯ ವಿಜೇತರಾದ ಮೇಘ ಧಾಡೆ ಟ್ರೋಫಿಯೊಂದಿಗೆ 18.60 ಲಕ್ಷ ರೂ. ಬಹುಮಾನದ ಮೊತ್ತ ನೀಡಲಾಗಿದೆ.

ಭಾನುವಾರ ನಡೆದ ಮೊದಲ ಆವೃತ್ತಿಯ ಮರಾಠಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಪುಷ್ಕರ್ ಜೋಗ್ ಅವರನ್ನು ಹಿಂದಿಕ್ಕಿ ಮೇಘ ಧಾಡೆ ವಿಜೇತರಾಗಿ ಹೊರಹೊಮ್ಮಿದರು.

ಅಂತಿಮ ಘಟ್ಟದಲ್ಲಿ ಮೇಘಾ, ಪುಷ್ಕರ್ ಜೋಗ್, ಶರ್ಮೀಷ್ಠಾ ರಾವತ್, ಆಸ್ಟಡ್ ಕಲೆ, ಸಾಯಿ ಲೋಕುರ್ ಹಾಗೂ ಸ್ಮಿತಾ ಗುಂಡ್ಕರ್ ಇದ್ದರು.

ಬಿಗ್ ಬಾಸ್ ರಿಯಾಲಿಟಿ ಶೋ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ನಲ್ಲೂ ಪ್ರಸಾರವಾಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: