ದೇಶ

2017-18ನೇ ಸಾಲಿನಲ್ಲಿ ಧೋನಿ ಪಾವತಿಸಿದ ತೆರಿಗೆ ಎಷ್ಟು.?

ಮುಂಬೈ,ಜು.24-ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿರುವ ಕ್ರಿಕೆಟಿಗ ಎಂ.ಎಸ್.ಧೋನಿ 2017-18ನೇ ಸಾಲಿನಲ್ಲಿ 12.17 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿ ಪಡೆದುಕೊಂಡಿದ್ದಾರೆ.

2016-17 ಸಾಲಿನಲ್ಲೂ ಧೋನಿ 10.93 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಐಸಿಸಿಯ ಪ್ರಾಯೋಜಿತ ಎಲ್ಲ ಕಪ್ ಗೆದ್ದ ನಾಯಕ ಧೋನಿ, 2015ರಲ್ಲಿ 765 ಕೋಟಿ ರೂ. ಆಸ್ತಿ ಹೊಂದಿದ್ದಾಗಿ ಅಂದಾಜಿಸಲಾಗಿತ್ತು. 2015 ರಲ್ಲೇ ಧೋನಿ ಪಂದ್ಯಗಳ ಸಂಭಾವನೆ ಹಾಗೂ ಜಾಹೀರಾತು ಕಂಪನಿಗಳಿಂದ ಸುಮಾರು 213 ಕೋಟಿ ರೂ. ಹಣ ಪಡೆದಿದ್ದರು. ಇದರ ಅನ್ವಯ ವಿಶ್ವದ 100 ಶ್ರೀಮಂತ ಕ್ರೀಡಾ ಪಟುಗಳ ಪಟ್ಟಿಯಲ್ಲಿ 2015ರಲ್ಲಿ ಧೋನಿ ಸ್ಥಾನ ಪಡೆದಿದ್ದರು.

2016ರಲ್ಲಿ ಧೋನಿ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗೆ ಇಳಿದರು. ಈ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ನೀಡಲಾಯಿತು. ಬಿಸಿಸಿಐ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಧೋನಿ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಧೋನಿ ಹಲವು ಜಾಹೀರಾತು ಕಂಪನಿಗಳ ಪ್ರಚಾರ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: