ಸುದ್ದಿ ಸಂಕ್ಷಿಪ್ತ

ವಿವಿಧ ಸಂಸ್ಥೆಗಳಿಂದ ಉಚಿತ ಹೊಲಿಗೆ ತರಬೇತಿ : ಅರ್ಜಿ ಆಹ್ವಾನ

ಮೈಸೂರು,ಜು.24 : ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಎನ್.ಆರ್.ಮೊಹಲ್ಲಾದ ಸ್ತ್ರೀ ದೀಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ 45 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ 3,500 ರೂಗಳ ಶಿಷ್ಯವೇತನವನ್ನು ನೀಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ದೂ.ಸಂ. 0821 4242408, 9792233195, 9740046944 ಅನ್ನು ಸಂಪರ್ಕಿಸಬಹುದು.

ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ನಾಯ್ಡು ನಗರದ ನೂಫ ಎಂಟರ್ ಪ್ರೈಸಸ್ ವತಿಯಿಂದಲೂ 45 ದಿನಗಳ ಉಚಿತ ಹೊಲಿಗೆ ತರಬೇತಿಯನ್ನ ಏರ್ಪಡಿಸಿದ್ದು, ಜು.20 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು ಆಸಕ್ತರು ಮೊ.ಸಂ. 8792233195, 8310230775 ಅನ್ನು ಸಂಪರ್ಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: