ಮನರಂಜನೆ

ಶಕೀಲಾ ಪಾತ್ರಕ್ಕಾಗಿ ರಿಚಾ ಚಡ್ಡಾ ತಯಾರಿ

ಬೆಂಗಳೂರು (ಜುಲೈ 24): ವಯಸ್ಕರ ಚಿತ್ರಗಳ ಮೂಲಕ ಒಂದು ಕಾಲದಲ್ಲಿ ಬೆಳ್ಳಿತೆರೆಯನ್ನೇ ಅಲುಗಾಡಿಸಿದ ಖ್ಯಾತಿ ನಟಿ ಶಕೀಲಾಗೆ ಸಲ್ಲುತ್ತದೆ. ಇದೀಗ ಶಕೀಲಾ ಜೀವನ ಚರಿತ್ರೆ ಬೆಳ್ಳಿತೆರೆಗೆ ಬರುತ್ತಿದೆ. ಶಕೀಲಾ ಪಾತ್ರದಲ್ಲಿ ಬಾಲಿವುಡ್ ಬೆಡಗಿ ರಿಚಾ ಚಡ್ಡಾ ಕಾಣಿಸಲಿದ್ದಾರೆ.

ಸಿಲ್ಕ್ ಸ್ಮಿತಾಗೆ ಪ್ರತಿಸ್ಪರ್ಧಿಯಾಗಿದ್ದ ಶಕೀಲಾ ಪ್ಲೇ ಗರ್ಲ್ ಪಾತ್ರಗಳ ಮೂಲಕ ತನ್ನದೇ ಆದಂತಹ ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಶಕೀಲಾ ಬಯೋಪಿಕ್ ಬಾಲಿವುಡ್ನಲ್ಲಿ ತೆರೆಗೆ ತರಲಾಗುತ್ತಿದೆ. ಈ ಪಾತ್ರಕ್ಕಾಗಿ ರಿಚಾ ಚಡ್ಡಾ ಸಾಕಷ್ಟು ತಯಾರಿ ನಡೆಸಿದ್ದು, ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಶಕೀಲಾ ಖಾನ್ ಅವರನ್ನು ಭೇಟಿಯಾಗಿ ಜೀವನದ ಹಲವು ಸಂಗತಿಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.

ತಮ್ಮ ಆರಂಭ ದಿನಗಳು, ವೃತ್ತಿ ಬದುಕಿನ ಬಗ್ಗೆ ಸಾಕಷ್ಟು ವಿವರಗಳನ್ನು ರಿಚಾಗೆ ಶಕೀಲಾ ಖಾನ್ ನೀಡಿದ್ದಾರೆ. ಇದುವರೆಗೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಶಕೀಲಾ ಅವರು, ತಮಿಳು ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ನಿರ್ಮಾಪಕರು ಇವರ ಕಾಲ್’ಶೀಟ್’ಗಾಗಿ ಕಾಯುವಂತಹ ಪರಿಸ್ಥಿತಿ ಇತ್ತು. ವಿಶೇಷವೆಂದರೆ ಈ ಬಾಲಿವುಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಇಂದ್ರಜಿತ್ ಲಂಕೇಶ್. ತೊಂಬತ್ತರ ದಶಕದಲ್ಲಿ ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ತಾರೆಯೂ ಹೌದು. (ಎನ್.ಬಿ)

Leave a Reply

comments

Related Articles

error: