ಮೈಸೂರು

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜು.26 ರಿಂದ ನ್ಯೂ ರಿಚ್ ವಸ್ತ್ರಾಭರಣ ಪ್ರದರ್ಶನ

ಮೈಸೂರು,ಜು.25 : ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನ್ಯೂ ರಿಚ್ ವಸ್ತ್ರಾಭರಣ ಕರಕುಶಲ ವಸ್ತು ಪ್ರದರ್ಶನವನ್ನು ಜು.26 ರಿಂದ ಆ.7ರವರೆಗೆ ಏರ್ಪಡಿಸಲಾಗಿದೆ ಎಂದು ಸಂಚಾಲಕ ಎಸ್.ಎಂ.ಹಾದಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ದಿ.26ರ ಸಂಜೆ 4.30ಕ್ಕೆ ಶಾಸಕ ಎಸ್.ಎ.ರಾಮದಾಸ್ ಪ್ರದರ್ಶನಕ್ಕೆ ಚಾಲನೆ ನೀಡುವರು, ಮಹಾಪೌರೆ ಬಿ.ಭಾಗ್ಯವತಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಜಯಪುರ್, ಕಾಶ್ಮೀರ್, ಬನಾರಸ್ನ ವಿಶೇಷ ಪ್ರಿಂಟೆಂಡ್ ಸೀರೆಗಳು, ಶಾಲ್ ಗಳು, ರಾಜಸ್ಥಾನಿ, ಬಂಗಾಳಿಯ ಕಾಟನ್ ಸೀರೆಗಳು, ರಜಾಯಿ, ಕುರ್ತಿಗಳು, ಉತ್ತರ ಪ್ರದೇಶದ ಬೆಟ್ ಶೀಟ್, ದಿವಾನ್ ಸೆಟ್ ಗಳು, ತಮಿಳುನಾಡಿನ ಸುಮಂಗಲಿ, ಹುಬ್ಬಳ್ಳಿಯ ಪಾರಂಪರಿಕ ಕಾಟನ್ ಸೀರೆಗಳು ಒಂದೇ ಮಳಿಗೆಯಡಿ ಲಭಿಸಲಿವೆ.

ಅಲ್ಲದೇ ಇದರೊಂದಿಗೆ ಕರಕುಶಲ ವಸ್ತುಗಳು, ಆಭರಣಗಳು ಸಹ ದೊರೆಯಲಿದ್ದು, ವ್ಯಾಪಾರಿಗಳಿಂದ ನೇರ ಗ್ರಾಹಕರಿಗೆ ತಲುಪುವುದರಿಂದ ದರವು ಕಡಿಮೆ ಇರುವುದು ಎಂದು ತಿಳಿಸಿದರು.

ವಸ್ತು ಪ್ರದರ್ಶನದ ಸಂಯೋಜಕರಾದ ದಿನೇಶ್ ಶರ್ಮಾ ಹಾಗೂ ಅವಿಲ್ ಶರ್ಮಾ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: