ಸುದ್ದಿ ಸಂಕ್ಷಿಪ್ತ
ಉಚಿತ ನೇತ್ರ ತಪಾಸಣೆ ಶಿಬಿರ
ಮೈಸೂರು ಜಿಲ್ಲಾ, ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕರಾದ ಕವಿತಾ ಅವರು ಶಕ್ತಿಧಾಮ ಸಂಸ್ಥೆಯಲ್ಲಿ ಇತ್ತೀಚಿಗೆ ಸಂಸ್ಥೆಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಮೈಸೂರಿನ ವಿಷನ್ ಎಕ್ಸ್ಪ್ರೆಸ್ ಸಂಸ್ಥೆಯ ಸಯೀದಾ ಬಾನು, ಕುಮಾರೇಶ್, ರಾಜೀವ್, ಮಂಜು ಮುಂತಾದ ವೈದ್ಯರ ತಂಡವು ಶಕ್ತಿಧಾಮದ ನಿವಾಸಿಗಳಿಗೆ ಮತ್ತು ಮಕ್ಕಳಿಗೆ ನೇತ್ರ ತಪಾಸಣೆಯನ್ನು ಮಾಡಿದರು. ಅವಶ್ಯಕತೆಯಿದ್ದ ಫಲಾನುಭವಿಗಳಿಗೆ ಔಷಧ ಮತ್ತು ಕನ್ನಡಕಗಳನ್ನು ಸಹ ಉಚಿತವಾಗಿ ನೀಡಲಾಯಿತು.