ಮೈಸೂರು

ಸರ್ಕಾರದ ವತಿಯಿಂದ ಮದಕರಿ ನಾಯಕ ಅವರ ಜಯಂತಿ ಆಚರಿಸುವಂತೆ ಮನವಿ

ಮೈಸೂರು,ಜು.25:- ಸರ್ಕಾರದ ವತಿಯಿಂದ ಮದಕರಿ ನಾಯಕ ಅವರ ಜಯಂತಿ ಆಚರಿಸುವಂತೆ ಮೈಸೂರು ಜಿಲ್ಲಾ ನಾಯಕರ ಯುವಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮೂಲಕ ಸರ್ಕಾರಕ್ಕೆ  ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ 70-80ಲಕ್ಷ ಜನಸಂಖ್ಯೆಯುಳ್ಳ ನಾಯಕ ಸಮುದಾಯದ ಚೇತನ, ಚಿತ್ರದುರ್ಗದಲ್ಲಿ ದಕ್ಷ ಆಡಳಿತ ನಡೆಸಿದ  ಕನ್ನಡ ಕುವರ ವೀರ ಮದಕರಿನಾಯಕ ಅವರು ಕರುನಾಡಿನ ವೀರ ಅಗ್ರಗಣ್ಯ ಹಾಗೂ ನಾಯಕ ಸಮುದಾಯದ ಕುಡಿಯಾಗಿರುತ್ತಾರೆ. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನಾಚರಣೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ಸೂಕ್ತ ಕ್ರಮವಹಿಸಿ ಸಮುದಾಯದ ಭಾವನೆಗೆ ಮನ್ನಣೆ ನೀಡುವಂತೆ ಸಹಕರಿಸಲು ಮನವಿ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ತಿಳಿಸಿದರು. ಈ ಸಂದರ್ಭ ವಿನೋದ್ ನಾಗವಾಲ, ರಾಜು,ಸುರೇಶ್, ತಿಮ್ಮನಾಯಕ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: