ಸುದ್ದಿ ಸಂಕ್ಷಿಪ್ತ

ವಿದ್ಯಾವರ್ಧಕ ಕಾಲೇಜಿನ 40ನೇ ವರ್ಷಾಚರಣೆ : ನಾಳೆ ಉಪನ್ಯಾಸ ಮಾಲಿಕೆ

ಮೈಸೂರು,ಜು.25 : ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷಾಚರಣೆ ಅಂಗವಾಗಿ ಇತಿಹಾಸ ವಿಭಾಗದಿಂದ ಉಪನ್ಯಾಸ ಮಾಲೆಯನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ (26) ಬೆಳಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಸ್.ರಂಗರಾಜು ಅವರು ಪ್ರಾಚ್ಯ ಅವಶೇಷಗಳ ಸಂಶೋಧನೆ ವಿಷಯವಾಗಿ ಉಪನ್ಯಾಸ ನೀಡುವರು.

ಸಂಚಾಲಕ ಪ್ರೊ.ಧನಂಜಯ ಪಾಲಹಳ್ಳಿ, ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಎಸ್.ಸವಿತ, ಪ್ರಾಂಶುಪಾಲರಾದ ಡಾ.ಎಸ್.ಮರೀಗೌಡ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: