ಪ್ರಮುಖ ಸುದ್ದಿ

ಪತ್ರಕರ್ತರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ: ಮಡಿಕೇರಿಯ ಯಂಗ್ ಸ್ಪೈಡರ್ಸ್ ತಂಡ ಚಾಂಪಿಯನ್

ರಾಜ್ಯ(ಮಡಿಕೇರಿ)ಜು.25:-  ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಕೊಳಕೇರಿ ಗ್ರಾಮದ ದಿವಂಗತ ಬಿದ್ದಾಟಂಡ ದೇವಯ್ಯ ಅವರ ಭತ್ತದ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ಹ್ಯಾಂಡ್‍ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಡಿಕೇರಿಯ ಯಂಗ್ ಸ್ಪೈಡರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಿರಾಜಪೇಟೆಯ ಟೈಗರ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರ ಹತ್ತಕ್ಕೂ ಅಧಿಕ ತಂಡಗಳು ಭಾಗವಹಿಸಿತ್ತು. ಸದಾ ಸುದ್ದಿಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರು ಬೆಳಗ್ಗಿನಿಂದಲೇ ಭತ್ತದ ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು. ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.  ಕೆಸರುಗದ್ದೆ ಕ್ರೀಡಾಕೂಟವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿದ್ದಾಟಂಡ ಬಿ. ಮುತ್ತಣ್ಣ ಉದ್ಘಾಟಿಸಿದರು. ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ನಾಪೋಕ್ಲು ಗ್ರಾಪಂ ಸದಸ್ಯೆ ಪುಲ್ಲೇರ ಪದ್ಮಿನಿ, ಸ್ಥಳೀಯರಾದ ಸೋಮಯ್ಯ ಮತ್ತಿತರರು ಹಾಜರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳೆಗಾರ ಬಿ.ಟಿ. ಕಾರ್ಯಪ್ಪ, ವಿರಾಜಪೇಟೆ ಉದ್ಯಮಿ  ಚುಪ್ಪ ನಾಗರಾಜು, ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ಖಜಾಂಚಿ ರೆಜಿತ್ ಕುಮಾರ್ ಗುಹ್ಯ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್ ಮತ್ತಿತರರು ಹಾಜರಿದ್ದರು.

ನಾಟಿ ಓಟ ಸ್ಪರ್ಧೆಯಲ್ಲಿ ಉದಯ್ ಮೊಣ್ಣಪ್ಪ(ಪ್ರ), ಅಜಿತ್ ನಾಣಯ್ಯ(ದ್ವಿ), ದಿವಾಕರ್(ತೃ)  ಬಹುಮಾನ ಪಡೆದುಕೊಂಡರು. ಕೆಸರುಗದ್ದೆಯಲ್ಲಿ ನಡೆದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿ ಯಂಗ್ ಸ್ಪೈಡರ್ಸ್ ತಂಡದಲ್ಲಿ ಆದರ್ಶ್, ನವೀನ್ ಡಿಸೋಜ, ವಿನೋದ್, ಇಸ್ಮಾಯಿಲ್ ಕಂಡಕರೆ, ವಿಘ್ನೇಶ್ ಎಂ. ಭೂತನಕಾಡು, ರೋಹಿತ್ ಹಾಗೂ ದ್ವಿತೀಯ ಸ್ಥಾನ ಪಡೆದ ವಿರಾಜಪೇಟೆ ಟೈಗರ್ಸ್ ತಂಡದಲ್ಲಿ ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಪಾಲ್ಗೊಂಡಿದ್ದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ್, ಅಜಿತ್ ನಾಣಯ್ಯ, ಬೊಳ್ಳಜಿರ ಅಯ್ಯಪ್ಪ, ವಿನೋದ್, ನವೀನ್ ಡಿಸೋಜ, ರೋಹಿತ್, ಲೋಕೇಶ್ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದಲ್ಲಿ ವಿರಾಜಪೇಟೆ ಟೈಗರ್ಸ್ ತಂಡದಲ್ಲಿ ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಎಂ.ಎನ್. ನಾಸೀರ್, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: