ಮೈಸೂರು

ದಿವ್ಯಾಂಗ ಮಕ್ಕಳಿಗೆ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಿದ ಸಿದ್ದಾರ್ಥ ಟ್ರಾಫಿಕ್ ಪೊಲೀಸರು

ಮೈಸೂರು,ಜು.25:-  ಮಕ್ಕಳ ಸಂಚಾರ ಉದ್ಯಾನವನದಲ್ಲಿ ಗ್ರಾಮೀಣ ದಿವ್ಯಾಂಗ ಮಕ್ಕಳಿಗೆ ಸಿದ್ದಾರ್ಥ ಟ್ರಾಫಿಕ್ ಪೊಲೀಸರು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.

ಈ ಸಂಚಾರ ಉದ್ಯಾನವನದಲ್ಲಿ  ಇಂದು ಸಿದ್ದಾರ್ಥ ನಗರ ಟ್ರಾಫಿಕ್ ಪೋಲಿಸರು ದಿವ್ಯಾಂಗ ಮಕ್ಕಳಿಗೆ ಸಂಚಾರಿ ನಿಯಮ ಪಾಲಿಸುವಂತೆ  ಜಾಗೃತಿ ಮೂಡಿಸಿದರು. ಮೈಸೂರಿನ ನಜ಼ರ್ ಬಾದ್ ನಲ್ಲಿರುವ ಪೊಲೀಸ್ ಆಯುಕ್ತರ ಕಛೇರಿ ಎದುರು ಈ ಮಕ್ಕಳ ಸಂಚಾರ ಉದ್ಯಾನವನ ಇದ್ದು, ಈ ಉದ್ಯಾನವನ ಸುಮಾರು 4 ಎಕರೆ ವಿಸ್ತೀರ್ಣವನ್ನು ಹೊಂದಿದೆ. ವಿವಿಧ ಸರ್ಕಾರಿ ಕಚೇರಿಗಳಾದ ಪೋಸ್ಟ್ ಆಫೀಸ್, ಆಸ್ಪತ್ರೆ , ರೈಲ್ವೆ ನಿಲ್ದಾಣ,ಸರ್ಕಾರಿ ಶಾಲೆ ಮಾರುಕಟ್ಟೆ , ಪೋಲಿಸ್ ಸ್ಟೇಷನ್ , ದೇವಸ್ಥಾನದ ಮಾದರಿ ಕಟ್ಟಡಗಳನ್ನು  ಈ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ವಿನೂತನವಾಗಿ ಟ್ರಾಫಿಕ್ ಸಿಗ್ನಲ್ ಸಿಸ್ಟಂ, ಪೆಲಿಕಾನ್, ಸೋಲಾರ್ ಬ್ಲಿಂಕರ್, ಸಿಸಿಟಿವಿ ವ್ಯವಸ್ಥೆ, ಟ್ರಾಫಿಕ್ ಚಿನ್ಹೆ ಗಳು, ವಿಎಂಎಸ್ ಸಿಸ್ಟಮ್ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಇಲ್ಲಿ ಪ್ರತ್ಯೇಕ ವಾಗಿ ಒಂದು ಕೊಠಡಿ ಇದ್ದು. ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಲಾಗಿದೆ. ಮೈಸೂರು ನಗರದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತಂದು ಅವರುಗಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.  ಜುಲೈ 1 ರಿಂದ 31 ರವರಗೆ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಮಾಹೆ ಹಿನ್ನಲೆಯಲ್ಲಿ ಮೈಸೂರು ನಗರ ಸಂಚಾರ ಪೋಲಿಸರು ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಮಾಹೆ ಅಂಗವಾಗಿ ಸಿದ್ದಾರ್ಥ ನಗರ ಟ್ರಾಫಿಕ್ ಪೊಲೀಸರಾದ ಚಂದನ್ ಹಾಗೂ ಶ್ರೀನಿವಾಸ್ ಎಂಬವರು ಟಿ.ನರಸೀಪುರದ ದಿವ್ಯಾಂಗ ಮಕ್ಕಳಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಅದರಿಂದಾಗುವ ಅನಾಹುತಗಳ ಬಗ್ಗೆ ಪ್ರೊಜೆಕ್ಟರ್ ಸ್ಕ್ರೀನ್ ಮೂಲಕ ಮಕ್ಕಳಿಗೆ ತೋರಿಸಿ ಸಂಚಾರಿ ನಿಯಮ ಪಾಲಿಸಬೇಕು ಎಂದು ಸಿದ್ದಾರ್ಥ ನಗರ ಟ್ರಾಫಿಕ್ ಪೋಲಿಸರು ತಿಳಿಸಿದರು.

ಒಟ್ಟಿನಲ್ಲಿ ಮೈಸೂರಿನಲ್ಲಿ ಈ ರೀತಿಯ ಒಂದು ಸಂಚಾರಿ ಉದ್ಯಾನವನ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪ್ರಯೋಜನವಾಗುತ್ತಿದ್ದು ಮೈಸೂರು ನಗರ ಖಾಕಿ ಪಡೆಯ ಈ ಮಹತ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು,ಇವರ ಕಾರ್ಯ ಇತರರಿಗೂ ಮಾದರಿ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: