
ಮೈಸೂರು
ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಲೂಟಿ
ಮೈಸೂರು,ಜು.26:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲಿನ ಚಿಲಕದ ಕೊಂಡಿ ಮೀಟಿ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದ ಘಟನೆ ಗಾಯತ್ರಿಪುರಂನಲ್ಲಿ ನಡೆದಿದೆ.
ಗಾಯತ್ರೀಪುರಂ ನಿವಾಸಿ ಜೀಯಾ ಉರ್ ರೆಹಮಾನ್, #18, 02 ನೇ ಹಂತ ಇವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದು, ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಚಿಲಕದ ಕೊಂಡಿಯನ್ನು ಯಾವುದೋ ಬಲವಾದ ಆಯುಧದಿಂದ ಮೀಟಿ ತೆರೆದು ಒಳಗೆ ಹಾಲ್ನಲ್ಲಿದ್ದ ಗಾಡ್ರೇಜ್ ಬೀರುವಿನ ಬಾಗಿಲನ್ನು ಮತ್ತು ಒಳಗಿನ ಸೀಕ್ರೇಟ್ ಲಾಕರ್ನ್ನು ಬಲವಾದ ಆಯುಧದಿಂದ ಮೀಟಿ ತೆರೆದು ಸೀಕ್ರೇಟ್ ಲಾಕರ್ನಲ್ಲಿದ್ದ ಸುಮಾರು 55 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಮತ್ತು ಸುಮಾರು 12 ಗ್ರಾಂ ತೂಕದ ಚಿನ್ನದ ಒಂದು ಜತೆ ಕಿವಿಯ ಓಲೆ ಮತ್ತು ಮಾಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಉದಯಗಿರಿ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)