ಮೈಸೂರು

ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು

ಮೈಸೂರು,ಜು.26:- ಸಾಲಬಾಧೆ ತಾಳಲಾರದೆ ರೈತರೋರ್ವರು ನೇಣಿಗೆ ಶರಣಾದ ಘಟನೆ  ಕೆ.ಆರ್.ನಗರ ತಾಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸೋಮಶೇಖರಯ್ಯ (60) ಎಂದು ಗುರುತಿಸಲಾಗಿದ್ದು, ಹಾಡ್ಯ ಕೃಷಿಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ಕೈಸಾಲ 2 ಲಕ್ಷದಷ್ಟು ಸಾಲ ಮಾಡಿದ್ದರು.ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳ ಮತ್ತು ತಂಬಾಕು ಬೆಳೆ ಕೈ ಕೊಟ್ಟ ಪರಿಣಾಮ ತನ್ನ ಜಮೀನಿನಲ್ಲಿದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ,ಓರ್ವ ಪುತ್ರ,ಪುತ್ರಿ ಇದ್ದಾರೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: