ಮೈಸೂರು

ಕಳ್ಳತನ ಪ್ರಕರಣ : ಓರ್ವನ ಬಂಧನ

ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕಪುರಂ 13ನೇ ಕ್ರಾಸ್ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದ್ದು, ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ವಿಶ್ವೇಶ್ವರ ನಗರದ ದೇವರಾಜ್ ಅರಸ್ ಕಾಲೋನಿಯ ನಿವಾಸಿ ಹರೀಶ್ ಅಲಿಯಾಸ್ ಭದ್ರ ಅಲಿಯಾಸ್ ವೀರಭದ್ರ (22) ಗುರುತಿಸಲಾಗಿದೆ. ಈತನನ್ನು ಉದಯಗಿರಿ ಭಾರತ್ ನಗರದಲ್ಲಿ ಬಂಧಿಸಿದ ಪೊಲೀಸರು ಕಳ್ಳತನ ನಡೆಸಿದ್ದ 1,20,000ರೂ.ಮೌಲ್ಯದ 40ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ  ಈ ಹಿಂದೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ಪತ್ತೆ ಕಾರ್ಯದಲ್ಲಿ ಅಶೋಕಪುರಂ ಠಾಣೆಯ ಇನ್ಸಪೆಕ್ಟರ್ ಎನ್.ಸಿದ್ದಯ್ಯ, ಪ್ರೊಬೆಷನರಿ ಪಿಎಸ್ಐ ಶಿವಕುಮಾರ್, ಸಿಬ್ಬಂದಿಗಳಾದ ಕಾಂತ, ಮಹದೇವು, ಆನಂದ, ಜಗದೀಶ್, ರಾಘವೇಂದ್ರ, ಶಿವಪ್ರಕಾಶ್, ಶಿವಕುಮಾರ್, ಗಿರೀಶ್ ಪಾಲ್ಗೊಂಡಿದ್ದರು.

 

Leave a Reply

comments

Related Articles

error: