ಮೈಸೂರು

ನೈತಿಕ ಮೌಲ್ಯ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ : ಡಾ. ವಿನೋದ್ ಭಟ್ ಸಲಹೆ

aiish-web-2ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಗಳನ್ನು ಮೈಗೊಡಿಸಿಕೊಂಡು ತತ್ತ್ವಾದರ್ಶ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಮಣಿಪಾಲ್ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್.ವಿನೋದ್ ಭಟ್ ಸಲಹೆ ನೀಡಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಥಮ ಪದವೀಧರ ದಿನಾಚರಣೆ  ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಡಾ.ಹೆಚ್.ವಿನೋದ್.ಭಟ್ ಮಾತನಾಡಿದರು.

ಉತ್ತಮ ವೈದ್ಯರು ಎಂದು ಕರೆಯಿಸಿಕೊಳ್ಳುವುದಲ್ಲದೇ ದೇಶಕ್ಕೆ ಉತ್ತಮ ನಾಗರಿಕರಾಗಿರಬೇಕು. ವಿಶಾಲ ಹೃದಯಿಗಳಾಗಿರಬೇಕು. ಪದವಿ ಮುಗಿದಾಕ್ಷಣ ಜ್ಞಾನಾರ್ಜನೆ ಮುಗಿಯಿತು ಎಂದರ್ಥವಲ್ಲ. ಜ್ಞಾನಾರ್ಜನೆಯನ್ನು ಮೊಟಕುಗೊಳಿಸದೇ ಸದಾ ಜ್ಞಾನಕ್ಕೆ ಹಾತೊರೆಯಬೇಕು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೋಗ ಸಂಶೋಧನಾ ಫೌಂಡೇಶನ್  ಕುಲಪತಿ ಡಾ.ಎಚ್.ಆರ್ ನಾಗೇಂದ್ರ ಮಾತನಾಡಿ ಶಿಕ್ಷಣದ ವೈವಿಧ್ಯತೆಗಳನ್ನು ಅಳವಡಿಸಿಕೊಳ್ಳಬೇಕು. ದೇಹದ ಮುಖ್ಯ ಅಂಗಗಳಾದ ವಾಕ್ ಮತ್ತು ಶ್ರವಣ  ಉತ್ತಮವಾಗಿದ್ದರೆ ಅವರನ್ನು ಅತ್ಯುನ್ನತ ಮಟ್ಟಕ್ಕೆ ಕರೆದ್ಯೂಯುತ್ತದೆ ಎಂದರಲ್ಲದೇ  ಭಾರತೀಯ ಪರಂಪರೆಯಲ್ಲಿ ಮರೆಯಾದ ಹಲವು ಪುರಾತನ ಶಿಕ್ಷಣ ವ್ಯವಸ್ಥೆಗಳನ್ನು ಪ್ರಸ್ತುತದಲ್ಲಿ ಅನುಷ್ಠಾನಕ್ಕೆ ತರಲು ಸರಕಾರ ಮುಂದಾಗಬೇಕು ಎಂದು ತಿಳಿಸಿದರು.

ಆಡಿಯೋಲಜಿಯಲ್ಲಿ ಸಹನಾ ಎಂಎಸ್ಸಿ, ಸ್ಪೀಚ್ ಫೈಥಾಲಜಿಯಲ್ಲಿ ವೀಣಾ ಎಸ್ ರಾವ್ ಎಂಎಸ್ಸಿ,  ಸ್ಪೀಚ್ ಫೈಥಾಲಜಿಯಲ್ಲಿ ನಿಕಿತಾ ಎಂಎಸ್ಸಿ ಅತಿ ಹೆಚ್ಚು ಅಂಕಗಳಿಸಿದ್ದು, ಚಿನ್ನದ ಪದಕ ಗಳಿಸಿದ್ದಾರೆ. ಅವರಿಗೆ ಈ ಸಂದರ್ಭ ಪದಕ ಪ್ರದಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮಾಜಿ ನಿರ್ದೇಶಕ ಡಾ.ನ.ರತ್ನ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನಿರ್ದೇಶಕರಾದ ಡಾ  ಎಸ್.ಆರ್.ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.

ಬಿಎಸ್ಸಿ, ಎಂಎಸ್ಸಿ, ಹಾಗೂ ಡಿಪ್ಲೋಮೊಗೆ ಸೇರಿದ ಒಟ್ಟು 110 ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

 

Leave a Reply

comments

Related Articles

error: