ಮೈಸೂರು

ಮೂಲ ವೇತನದಿಂದ ಬೇರ್ಪಡಿಸಿರುವ ಶಿಕ್ಷಕರ ವಿಶೇಷ ಭತ್ಯೆ : ಎಂ.ಲಕ್ಷ್ಮಣ್ ಖಂಡನೆ

ಚರ್ಚಿಸಲು ಜು.28ರಂದು ಶಿಕ್ಷಕರ ಸಭೆ

ಮೈಸೂರು,ಜು.26 : ಶಿಕ್ಷಕರ, ಉಪನ್ಯಾಸಕರ ವಿಶೇಷ ಭತ್ಯೆ 4 ರಿಂದ 5 ನೂರು ರೂ.ಗಳನ್ನು ನೀಡದಿರುವುದು, ಕುಮಾರನಾಯಕ್ ವರದಿಯ ವಿಶೇಷ ಭತ್ಯೆಯನ್ನು ಮೂಲ ವೇತನದಿಂದ ಬೇರ್ಪಡಿಸಿರುವುದು, ಇವೇ ಮೊದಲಾದ ಸರ್ಕಾರದ ಕ್ರಮಗಳ ಬಗ್ಗೆ ಹಾಗೂ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಜು. 28 ರಂದು ಮಧ್ಯಾಹ್ನ 3ಕ್ಕೆ ಜೆಎಲ್‌ಬಿ ರಸ್ತೆಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ‍್ಸ್ ಸಭಾಗಂಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಕರು, ಉಪನ್ಯಾಸಕರಿಗೆ ವಿಶೇಷ ಭತ್ಯೆ ನಿಡುವುದಿಲ್ಲವೆಂದು ಹೊರಡಿಸಿರುವ ಆದೇಶ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರಲ್ಲದೆ, ಕುಮಾರನಾಯಕ್ ವರದಿಯಂತೆ ಹೆಚ್ಚುವರಿ ಭತ್ಯೆಯನ್ನು ಮೂಲವೇತನದಿಂದ ಬೇರ್ಪಡಿಸಿ, ಪ್ರತ್ಯೇಕ ಕಲಂನಲ್ಲಿ ಸೇರಿಸಿರುವುದರಿಂದ ರಾಜ್ಯದ ಸರ್ಕಾರಿ, ಅನುದಾನಿತ ಶಿಕ್ಷಕರು, ಉಪನ್ಯಾಸಕರು ಎಚ್‌ಆರ್‌ಎ, ಡಿಎ ಮತ್ತು ಒಂದು ಭತ್ಯೆಯಿಂದ ವಂಚಿತರಾಗುವುದರಿಂದಾಗಿ ಈ ನಿರ್ಧಾರ ವಾಪಸು ಪಡೆಯಬೇಕೆಂದರು.

ಅಲ್ಲದೆ, ರೈತರ ಸಾಲ ಮನ್ನಾಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ, ಈ ಕಾರಣದಿಂದ ಶಿಕ್ಷಕರು, ಉಪನ್ಯಾಸಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದರು.

ಜೊತೆಗೆ, ಜೆಡಿಎಸ್ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಎಪ್‌ಪಿಎಸ್ ರದ್ದು ಪಡಿಸಿ, ಒಪಿಎಸ್ ಜಾರಿ ಮಾಡುವ ಬಗ್ಗೆ ಘೋಷಿಸಿದ್ದರೂ, ಈ ಬಗ್ಗೆ ಇದರ ಬಗ್ಗೆ ಮಾತನಾಡದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಇನ್ನು, ಈ ಸರ್ಕಾರ ಬಂದ ನಂತರವೂ ಇಷ್ಟೆಲ್ಲ ಸಮಸ್ಯೆಯನ್ನು ಶಿಕ್ಷಕರು, ಉಪನ್ಯಾಸಕರು ಎದುರಿಸುತ್ತಿದ್ದರೂ, ಇವರಿಂದ ಆಯ್ಕೆಯಾದ ಮರಿತಿಬ್ಬೇಗೌಡ ಮೊದಲಾದವರು ಚಕಾರ ಎತ್ತದಿರುವುದು ಬೇಸರದ ಸಂಗತಿಯಾಗಿದೆ ಎಂದರಲ್ಲದೆ,

ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಮುಂದಿನ ಹೋರಾಟದದ ರೂಪುರೇಷೆ ನಿರ್ಧರಿಸುವ ಕಾರಣದಿಂದ ಜು. ೨೮ ರಂದು ಕರೆದಿರುವ ಸಭೆಗೆ ಶಿಕ್ಷಕರು, ಉಪನ್ಯಾಸಕರು ತಪ್ಪದೇ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆ ಮನವಿ ಮಾಡಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: