ಸುದ್ದಿ ಸಂಕ್ಷಿಪ್ತ

ಪರಿಶಿಷ್ಟರ ಸಾಲ ಮನ್ನಾಕ್ಕೆ ಒತ್ತಾಯ

ಮೈಸೂರು,ಜು.26 : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಸಾಲ ಮನ್ನಾ ಮಾಡುವ ಮೂಲಕ ಪರಿಶಿಷ್ಟ ಜಾತಿಯವರನ್ನು ಸಾಲ ಮುಕ್ತರನ್ನಾಗಿಸಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಇಂಟರ್ ನ್ಯಾಷನಲ್ ಫೌಂಡಷನ್ ಕೋರಲಾಗಿದೆ.

ರಾಜ್ಯದಲ್ಲಿ ಈಚೆಗೆ ರೈತರ ಸಾಲ ಮನ್ನಾ ಘೋಷಣೆಯಾಗಿದ್ದು ಅದರಂತೆ ಶತಶತಮಾನಗಳಿಂದ ತುಳಿತಕ್ಕೊಳಗಾದ ಪರಿಶಿಷ್ಟರ ಸಾಲ ಮನ್ನಾ ಮಾಡುವ ಮೂಲಕ ಸಮುದಾಯದ ಕಲ್ಯಾಣಕ್ಕೆ ಸಹಕರಿಸಬೇಕೆಂದು ಅಧ್ಯಕ್ಷೆ ಮಂಗಳಗೌರಿ ಮತ್ತಿತರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: