ಮೈಸೂರು

ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕವಿಗಳ ಅಗತ್ಯವಿದೆ: ಬಿ.ಆರ್. ಲಕ್ಷ್ಮಣರಾವ್

ಇಂದಿನ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕವಿಗಳ ಅಗತ್ಯವಿದೆ ಅಂತಹವರನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ತಿಳಿಸಿದರು.

ಮೈಸೂರಿನ ಶ್ರೀರಾಜೇಂದ್ರ ಭವನದಲ್ಲಿ ನಡೆದ ಸಮಾರಂಭದಲ್ಲಿ ಡಾ. ಸಂತೋಷ್ ಚೊಕ್ಕಾಡಿ ಅವರ ಭಾವಗೀತೆಗಳ ಮಧುರ ಕ್ಷಣ ಧ್ವನಿಸುರುಳಿಯನ್ನು ಕವಿ ಬಿ.ಆರ್. ಲಕ್ಷ್ಮಣರಾವ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಒಳ್ಳೆಯ ಕವಿತೆಗಳು ಮಾತ್ರ ಜನಮಾನಸದಲ್ಲಿ ಸದಾಕಾಲ ಉಳಿಯಲು ಸಾಧ್ಯ. ಹಾಡಿನ ಮೂಲಕ ಜನರನ್ನು ತಟ್ಟಿದ ಕವಿತೆಯೂ ಜನರ ಮನಸ್ಸಿನಲ್ಲಿರುತ್ತದೆ ಎಂದು ಹೇಳಿದರು.

ಡಾ.ಸಂತೋಷ್ ಚೊಕ್ಕಾಡಿ ಅವರ ಕವಿತೆ ಜನಪ್ರಿಯವಾಗಿದೆ. ಭಾವಗೀತೆಯಾಗಿ ಧ್ವನಿಸುರುಳಿಯಾಗಿದೆ. ಮಧುರ ಕ್ಷಣಗಳ ಜೊತೆಗೆ ಕಠೋರತೆಯೂ ಇದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಸಾಹಿತಿ ಡಾ.ಅರವಿಂದ ಮಾಲಗತ್ತಿ, ಕವಿ ಸುಬ್ರಾಯ ಚೊಕ್ಕಾಡಿ, ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: