ಮೈಸೂರು

ಕೇಕ್ ಉತ್ಸವ-2016 : ಅರ್ಜಿ ಆಹ್ವಾನ

ಗ್ರಾಹಕ ವ್ಯವಹಾರಗಳ ಇಲಾಖೆ, ಹೋಟೆಲ್,ಬೇಕರಿ. ಆಹಾರ,ನಾಗರಿಕ ಸರಬರಾಜು ಮತ್ತು ಸ್ವೀಟ್ ಸ್ಟಾಲ್ಗಿಳ ಮಾಲೀಕರುಗಳ ಸಂಘದ ಸಹಯೋಗದಲ್ಲಿ ಜನಪ್ರಿಯ ಕೇಕೆ ಉತ್ಸವ 2016 ಅನ್ನು ಹಮ್ಮಿಕೊಳ್ಳಲಾಗಿದೆ.
ಉತ್ಸವವೂ ಡಿ.27ಮತ್ತು28ರಂದು ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಉತ್ಸವದಲ್ಲಿ ಭಾಗವಹಿಸಲಿಚ್ಚಿಸುವ ಹೋಟೆಲ್ ಮಾಲೀಕರು, ಬೇಕರಿ ಮತ್ತು ಸ್ವೀಟ್ ಕಾಂಡಿಮೆಂಟ್ಸ್ ಹಾಗೂ ಬೇಕರಿ ಉತ್ಪನ್ನಗಳ ತಯಾರಕರು ಅರ್ಜಿ ಸಲ್ಲಿಸಲು ಡಿ.22ರಂದು ಕೊಠಡಿ ಸಂಖ್ಯೆ 17. ಜಿಲ್ಲಾಧಿಕಾರಿಗಳ ಕಚೇರಿಯ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮೈಸೂರು ಇಲ್ಲಿ ಸಂಪರ್ಕಿಸಬಹುದು.
ಸ್ಥಳ ಮತ್ತು ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು, ಕೇಕ್ ಸ್ಟಾಲ್ ತೆರೆಯುವ ಮಳಿಗೆಗಳಿಗೆ ವಿಶೇಷ ಬಹುಮಾನವೂ ಇರುವುದು. ಅಲ್ಲದೇ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಕೆ.ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದೂರವಾಣಿ ಸಂಖ್ಯೆ :9611165367, 0921-2422107. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ದೂ.ಸಂ:9485129220 ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಪೋ.ಸಂ :9740973076 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: