ಕರ್ನಾಟಕ

ಜಾನಪದ ಸಂಗೀತ ಕಲಾ ತಂಡಗಳ ಆಹ್ವಾನ

ಮಂಡ್ಯ (ಜುಲೈ 26): ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಹಾಗೂ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಳ್ಳುವ ಗ್ರಾಮ ಸಂಪರ್ಕ ಯೋಜನೆಯಡಿ 2018-19ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಜಾನಪದ ಸಂಗೀತ ಕಾರ್ಯಕ್ರಮ ನೀಡಲು ಆಸಕ್ತ ನೋಂದಾಯಿತ ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಕಲಾ ತಂಡಗಳು ಸಂಗೀತ ಕಾರ್ಯಕ್ರಮಗಳಲ್ಲಿ ಅನುಭವ ಹೊಂದಿರಬೇಕು. ಒಂದು ಸಂಗೀತ ಕಲಾ ತಂಡದಲ್ಲಿ ಕಡ್ಡಾಯವಾಗಿ ಮೂರು ಜನ ಕಲಾವಿದರಿರಬೇಕು. ಒಬ್ಬರು ಮಹಿಳಾ ಕಲಾವಿದರು ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದ ಓರ್ವ ಕಲಾವಿದರನ್ನು ಹೊಂದಿರಬೇಕು.

ತಂಡದ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತು ಪಾನ್‍ಕಾರ್ಡ್ ಹಾಗೂ ಎಲ್ಲಾ ಕಲಾವಿದರು ಬ್ಯಾಂಕ್ ಖಾತೆ ಹೊಂದಿರಬೇಕು. ತಂಡವು ನೊಂದಣಿಯಾಗಿ ಮೂರು ವರ್ಷಗಳಾಗಿರಬೇಕು. ತಂಡವು ನೋಂದಾಯಿಸಿದ ನೋಂದಣಿ ಪ್ರತಿ ಹಾಗೂ 2017-18ನೇ ಸಾಲಿನಲ್ಲಿ ತಂಡವು ನೋಂದಾವಣಿ ನವೀಕರಿಸಿದ ಪ್ರತಿ ಮತ್ತು ಕಳೆದ ಮೂರು ವರ್ಷದ ಅಡಿಟ್ ಪ್ರತಿ ಅರ್ಜಿಯೊಂದಿಗೆ ಕಲಾವಿದರ ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ.

ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪ್ರದರ್ಶನ ಮಾಡಲು ತಂಡ ಸಿದ್ಧವಿರಬೇಕು. ಆಯ್ಕೆ ಸಂದರ್ಭದಲ್ಲಿ ಭಾಗವಹಿಸಿದ ಕಲಾವಿದರೇ ಕ್ಷೇತ್ರಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ರದರ್ಶನದ ಸಂದರ್ಭದಲ್ಲಿ ಕಲಾವಿದರ ಬದಲಾವಣೆ ಮಾಡುವಂತಿಲ್ಲ. ತಂಡದಲ್ಲಿರುವ ಕಲಾವಿದರು, ಮಂಡ್ಯ ಜಿಲ್ಲೆಯವರಾಗಿಬೇಕು.

ತಂಡವನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ತಮ್ಮ ಪ್ರದರ್ಶನ ಸಾಮರ್ಥ್ಯದ ಆಧಾರದ ಮೇಲೆ ಸಮಿತಿ ಆಯ್ಕೆ ಮಾಡುತ್ತದೆ. ಆಯ್ಕೆಯಾದ ತಂಡಗಳಿಗೆ ವಿಭಾಗ ಮಟ್ಟದಲ್ಲಿ ತರಬೇತಿ ನೀಡಲಾಗುವುದು.

ನಿಗದಿತ ಅರ್ಜಿ ನಮೂನೆಗಳನ್ನು ಉಚಿತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 31 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಛೇರಿಯ ದೂರವಾಣಿ ಸಂಖ್ಯೆ: 08232-224153 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: