ಕರ್ನಾಟಕ

ಆಲೂಗಡ್ಡೆ ಬೆಳೆ: ಸಸ್ಯ ಸಂರಕ್ಷಣಾ ಕ್ರಮಗಳ ಕಡ್ಡಾಯವಾಗಿ ಪಾಲಿಸಲು ಸಲಹೆ

ಹಾಸನ (ಜುಲೈ 26): ಆಲೂಗಡ್ಡೆ ಬೆಳೆಯು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಪ್ರಮುಖ ಬೆಳೆಯಾಗಿದ್ದು, ಬಿತ್ತನೆಯಿಂದ ಕೊಯ್ಲಿನ ಹಂತದವರೆಗೂ ವಿವಿಧ ರೋಗ ಹಾಗೂ ಕೀಟ ಬಾದೆಗಳಿಗೆ ತುತ್ತಾಗುವ ಮೂಲಕ ಬೆಳೆಯ ಇಳುವರಿ ಕುಂಠಿತಗೊಳಿಸಿ ಆರ್ಥಿಕ ನಷ್ಟ ತಂದೊಡ್ಡುತ್ತವೆ.

ಅದ ಕಾರಣ ರೈತ ಬಾಂಧವರು ಕೆಳಕಂಡ ಸುಧಾರಿತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.

ಮುನ್ನೇಚರಿಕೆ ಕ್ರಮವಾಗಿ 25 ರಿಂದ 30 ದಿನದ ಬೆಳೆಗೆ ಗಿಡದ ಎಲ್ಲಾ ಭಾಗಗಳು ಸಂಪೂರ್ಣವಾಗಿ ನೆನೆಯುವಂತೆ ಮ್ಯಾಂಕೋಜೆಬ್+ಡೈಮಿಥೋಯೇಟ್ (3ಗ್ರಾಂ+1.7ಮಿ.ಲೀ/ಪ್ರತಿ ಲೀ) ಅಥವಾ ಮ್ಯಾಂಕೋಜೆಬ್+ಇಮಿಡಾಕ್ಲೋಫ್ರಿಡ್ ( 3ಗ್ರಾಂ+0.5 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ) ಔಷಧಿಯನ್ನು ಸಿಂಪರಣೆ ಮಾಡುವುದರ ಮೂಲಕ ಮೊದಲ ಅಂಗಮಾರಿ ರೋಗ ನಿಯಂತ್ರಿಸಲಾಗುವುದು.

ಎರಡನೇ ಸಿಂಪರಣೆಯನ್ನು, 40 ರಿಂದ 45 ದಿನಗಳ ಬೆಳೆಗೆ ಕೊನೆಯ ಅಂಗಮಾರಿ ರೋಗಬಾಧೆಯ ಲಕ್ಷಣ ಕಂಡುಬಂದಲ್ಲಿ ಮ್ಯಾಂಕೋಜೆಬ್+ಸೈಮೋಕ್ಸಾನಿಲ್ (ಮ್ಯಾಕ್ಸಿಮೇಟ್/ಕರ್ಜೆಟ್) ಅಥವಾ ಫೆನಜಾಕ್ವಿನ್ (2.5ಗ್ರಾಂ ಪ್ರತಿ ಲೀ ನೀರಿನಲ್ಲಿ) ದ್ರಾವಣವನ್ನು ಗಿಡಗಳ ಸಂಪೂರ್ಣ ಭಾಗ ತೊಯ್ಯುವಂತೆ ಸಿಂಪಡಿಸಬೇಕು.

ಕೊನೆಯ ಅಂಗಮಾರಿ ರೋಗವು ಮಂದುವರೆದ ಸಂದರ್ಭದಲ್ಲಿ 52 ರಿಂದ 60 ದಿನದ ಬೆಳೆಗೆ ಡೈಮಿಥೋಮಾರ್ಫ್+ಮ್ಯಾಂಕೋಜೆಬ್ ಅಥವಾ ಮ್ಯಾಂಕೋಜೆಬ್+ ಪೆನಾಮಿಡೋನ್ (1ಗ್ರಾಂ+3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ದ್ರಾವಣದಿಂದ ಸಿಂಪರಣೆಯನ್ನು, ಕೊನೆಯ ಸಿಂಪಡೆಯನ್ನು ಬೆಳೆಯು 65-70 ದಿನದ ಹಂತದಲ್ಲಿದ್ದಾಗ ಮ್ಯಾಂಕೋಜೆಬ್+ಪೆನಾಮಿಡೋನ್ (2ಗ್ರಾಂ ಪ್ರತಿ ಲೀ ನೀರಿಗೆ) ದ್ರಾವಣದಿಂದ ಕೈಗೊಂಡಾಗ, ಕೊನೆಯ ಅಂಗಮಾರಿ ರೋಗದ ನಿಯಂತ್ರಣ ಸಾಧಿಸಿ ಉತ್ತಮ ಗಡ್ಡೆಗಳನ್ನು ಪಡೆಯಬಹುದಾಗಿದೆ.

ಈಗಾಗಲೇ ಇಲಾಖಾ ವತಿಯಿಂದ ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣಾ ಔಷಧಿಯನ್ನು ವಿತರಿಸಲಾಗುತ್ತಿದ್ದು, ಎಲ್ಲಾ ರೈತ ಬಾಂಧವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.

ವಿಶೇಷ ಸೂಚನೆ: ಪ್ರತಿ ಸಿಂಪರಣೆಯಲ್ಲಿ ಔಷಧಿಗಳ ಜೊತೆಗೆ ಗಮ್ (ಅಂಟನ್ನು ) 0.5ಮಿ.ಲೀ/ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಪವರ್ ಸ್ಪ್ರೇಯರ್ ನಿಂದಲೇ ಕಡ್ಡಾಯವಾಗಿ ಸಿಂಪರಣೆ ಮಾಡುವುದು. ಆಲೂಗಡ್ಡೆ ತಾಕಿನಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಅಥವಾ ಏರು ಮಡಿ ಪದ್ದತಿಯಲ್ಲಿ ಹನಿ ನೀರಾವರಿ ಸೂಕ್ತವಾಗಿರುತ್ತದೆ.

ಸಿಂಪರಣೆಯನ್ನು ವಾತಾವರಣ, ರೋಗ ಮತ್ತು ಕೀಟ ಹಾವಳಿಗನುಗುಣವಾಗಿ ಸಾಮೂಹಿಕವಾಗಿ ಮಾಡಬೇಕು. ಬಿತ್ತನೆ ಮಾಡಿದ 30, 45 ಮತ್ತು 60 ದಿವಸಗಳ ಅಂತರದಲ್ಲಿ ಔಷಧಿ ಸಿಂಪರಣೆ ಜೊತೆಯಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ ವೆಜಿಟೆಬಲ್ ಸ್ಪೆಷಲ್ 5ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಗೂ ಒಂದುಶ್ಯಾಂಪೂ+ 1 ನಿಂಬೆಹಣ್ಣನ್ನು /25ಲೀ. ನೀರಿಗೆ ಬೆರಸಿ ಸಿಂಪಡಿಸುವುದರಿಂದ ಶೇಕಡ 10-15 ರಷ್ಟು ಹೆಚ್ಚು ಇಳುವರಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಹಾಗೂ ತಾಂತ್ರಿಕ ವಿವರಗಳಿಗೆ ಸಂಪರ್ಕಿಸಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಹಾಸ£ ದೂ : 08172-268387, ದೂ.9448999223, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ)ಹಾಸನ ದೂ :08172-262390 ದೂ 9900238655, ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ : ದೂ :8105121994, ಕಟ್ಟಾಯ ದೂ :8867452263, ಸಾಲಗಾಮೆ ದೂ : 9481364989, ದುದ್ದ ದೂ :9113690760, 8310474456 ಶಾಂತಿಗ್ರಾಮ ದೂ : 9844340103, 8971464352 ಆಲೂಗಡ್ಡೆ ಸಂಶೋಧನಾ ಕೇಂದ್ರ, ಸೋಮನಹಳ್ಳಿ ಕಾವಲು ದೂ : 9449872864, 9901066699, ಕೃಷಿ ಕಾಲೇಜು, ಕಾರೇಕೆರೆ ದೂ : 08172-221177, ಕೃಷಿ ಸಂಶೋಧನಾÀ ಕೇಂದ್ರ, ಮಡೇನೂರು ದೂ : 08172-258825, ಕೃಷಿ ವಿಜ್ಞಾನ ಕೇಂದ್ರ, ಕಂದಲಿ ದೂ : 08172-256072, 8971343517. (ಎನ್.ಬಿ)

Leave a Reply

comments

Related Articles

error: