ಪ್ರಮುಖ ಸುದ್ದಿ

21ನೇ ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ಅಶ್ವಿನಿ ಪೊನ್ನಪ್ಪ ಅವರಿಗೆ 33 ಲಕ್ಷ ರೂ.ಚೆಕ್ ನೀಡಿದ ಡಿಸಿಎಂ

ರಾಜ್ಯ(ಬೆಂಗಳೂರು)ಜು.27:- ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ ನಲ್ಲಿ ನಡೆದ 21ನೇ ಕಾಮನ್‌ವೆಲ್ತ್ ಗೇಮ್ಸ್‌ ನ ಬ್ಯಾಡ್ಮಿಂಟನ್ ಕ್ರೀಡೆಯ ಮಿಶ್ರ ಟೀಂ ವಿಭಾಗದಲ್ಲಿ ಚಿನ್ನ ಹಾಗೂ ಮಹಿಳಾ ಡಬಲ್ಸ್‌ ನಲ್ಲಿ ಕಂಚು ಗೆದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ 33 ಲಕ್ಷ ರೂ.ಚೆಕ್ ಕೊಡುಗೆಯಾಗಿ ನೀಡಿದ್ದಾರೆ.

ವಿಧಾನಸೌಧ ಕಚೇರಿಯಲ್ಲಿ ಅಶ್ವಿನಿ‌ ಪೊನ್ನಪ್ಪ ಅವರನ್ನು ಸನ್ಮಾನಿಸಿ ಬಳಿಕ ಮಾಧ್ಯಮದೊಂದಿಗೆ ಮಾತ‌ನಾಡಿದ ಪರಮೇಶ್ವರ್, ಕಾಮನ್‌ ವೆಲ್ತ್ ಗೇಮ್‌ನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಅಶ್ವಿನಿ‌ಪೊನ್ನಪ್ಪ ಅವರಿಗೆ 25 ಲಕ್ಷ ರೂ. ಹಾಗೂ ಕಂಚಿಗೆ 8 ಲಕ್ಷ ರೂ. ಪುರಸ್ಕಾರ ನೀಡಲಾಗಿದೆ.  ಒಲಂಪಿಕ್ಸ್‌ ಗಾಗಿ ತಯಾರಿ ನಡೆಸುತ್ತಿರುವ ಇವರು, ಚಿನ್ನ‌ ಗೆಲ್ಲುವ‌ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ‌ ಎಂದು ಆಶಿಸಿದರು, ಒಲಂಪಿಕ್ಸ್‌ ನಲ್ಲಿ ಚಿನ್ನ ಗೆದ್ದರೆ 5 ಕೋಟಿ ರೂ., ಬೆಳ್ಳಿಗೆ 3 ಕೋಟಿ ರೂ. ಹಾಗೂ ಕಂಚು ಗೆದ್ದರೆ 2 ಕೋಟಿ‌ ರೂ. ನೀಡುವುದಾಗಿ ಸರಕಾರ ಘೋಷಿಸಿದೆ ಎಂದು ಹೇಳಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: