ದೇಶಮೈಸೂರು

ಕಪ್ಪುಹಣದ ವಿರುದ್ಧ ತೀವ್ರತೆ ಪಡೆದ ದಾಳಿ: ಬ್ಯಾಂಕ್‍ ಖಾತೆಗಳ ವಿವರ ನೀಡಲು ಆರ್‍.ಬಿ.ಐ. ಆದೇಶ

ದೇಶದಲ್ಲಿ ಕಾಳಧನಕೋರರನ್ನು ಮಣಿಯಲ್ಲು ಕೇಂದ್ರ ಸರ್ಕಾರ ನೋಟು ಅಮಾನ್ಯಗೊಂಡ ನಂತರ ದಿನದಿಂದ ದಿನಕ್ಕೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುತ್ತಿದ್ದೆ.
ಈ ನಿಟ್ಟಿನಲ್ಲಿ ನ.8ರ ನಂತರ ಬ್ಯಾಂಕ್‍ ಖಾತೆಗಳಲ್ಲಿ ಎರಡು ಲಕ್ಷ ಹಾಗೂ ಅದಕ್ಕಿಂತ ಅಧಿಕ ಜಮೆಯಾದವರ ಖಾತೆಗಳ ವಿವರವನ್ನು ಹಾಗೂ ಗುರುತಿನ ವರದಿ ನೀಡುವಂತೆ ಬ್ಯಾಂಕ್ಗ್ಳಿಗೆ ರಿಸರ್ವ್ ಬ್ಯಾಂಕ್‍ ಆದೇಶಿಸಿದೆ.
ಈಗಾಗಲೇ ಸರ್ಕಾರ ಕಾಳಧನಿಕರನ್ನು ಎಡೆಮುರಿಕಟ್ಟಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾ ದೃಢ ಹೆಜ್ಜೆಯನ್ನಿಸಿದ್ದು ಎರಡು ಲಕ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟು ಹಣವಿರುವ ಬ್ಯಾಂಕ್ ಖಾತೆಗಳ ವಿವರವನ್ನು ನೀಡುವಂತೆ ಸೂಚಿಸಿದೆ. ಇಂತಹ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ಕಾಳದಂಧೆಕೋರರು ರಂಗೋಲಿ ಕೆಳಗೆ ನುಸುಳಿದ್ದಾರೆ. ಇದಕ್ಕೆ ಸುಲಭವಾಗಿ ಬಲಿಯಾದವರು ಬಡ ಜನಧನ್ ಠೇವಣಿದಾರರು. ಈ ಸಂಬಂಧ ಆರ್ಬಿಂಐ ಮೂರು ವರ್ಗಗಳ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿನ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Leave a Reply

comments

Related Articles

error: