ಪ್ರಮುಖ ಸುದ್ದಿಮೈಸೂರು

2 ನೇ ಆಷಾಢ ಶುಕ್ರವಾರ ಹಿನ್ನೆಲೆ : ಹೂಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ದೇವಾಲಯ ;ತಾಯಿಯ ದರ್ಶನ ಪಡೆದ ಸಚಿವ ಸಿ.ಎಸ್.ಪುಟ್ಟರಾಜು

ಮೈಸೂರು,ಜು.27:- ಚಾಮುಂಡಿಬೆಟ್ಟದಲ್ಲಿ 2 ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಯುತ್ತಿದೆ.

ಮುಂಜಾನೆಯಿಂದಲೇ ಅಭಿಷೇಕ,ರುದ್ರಾಭೀಷೇಕ,ಪಂಚಾಮೃತ ಅಭಿಷೇಕಗಳು ನಡೆಯುತ್ತಿದ್ದು,  ಪ್ರತಿಬಾರಿ 5.30 ಕ್ಕೆ ದರ್ಶನ ಕಲ್ಪಿಸಲಾಗುತ್ತಿತ್ತು.ಇಂದು ಚಂದ್ರ ಗ್ರಹಣ ಹಿನ್ನೆಲೆಯಲ್ಲಿ 5 ಗಂಟೆಯಿಂದಲೇ ಭಕ್ತರಿಗೆ ದರ್ಶನ ಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಂಪು ಬಣ್ಣದ ಸೀರೆಯನ್ನುಟ್ಟು ಶೇಷ ಲಕ್ಷ್ಮೀ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಾಳೆ. ಬನ್ನಿಮಂಟಪದ ರಾಜಣ್ಣ ಎಂಬ ಭಕ್ತರೋರ್ವರು ದೇವಾಲಯದ ಸುತ್ತ ಹೂವಿನ ಅಲಂಕಾರ ಮಾಡಿದ್ದಾರೆ. ಸಂಜೆ 6 ಕ್ಕೆ ಅಭಿಷೇಕ ,ಮಹಾಮಂಗಳಾರತಿ ನಂತರ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ  ಅವಕಾಶ ಇರುವುದಿಲ್ಲವೆಂದು ಪ್ರಧಾನ ಅರ್ಚಕರು ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಎರಡನೇ ಆಷಾಢ ಶುಕ್ರವಾರದ ಸಂಭ್ರಮದಲ್ಲಿ ದೇವಿ ದರ್ಶನಕ್ಕಾಗಿ ಮುಂಜಾನೆಯಿಂದಲೇ ಭಕ್ತರ ಸರತಿ ಸಾಲು ಕಂಡು ಬಂದಿದೆ. ಸಾವಿರಾರು ಭಕ್ತರು ಪೂಜೆ, ಪುನಸ್ಕಾರ ಕೈಗೊಂಡಿದ್ದಾರೆ. ಇಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಪತ್ನಿ ಸಮೇತ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: