ಕರ್ನಾಟಕ

ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಉಡುಪಿ ಮೂಲದ ನರ್ಸ್

ಉಡುಪಿ,ಜು.27-ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಶಿರ್ವ ಮೂಲದ ಮಹಿಳೆ ಹೆಝಲ್ ಜೋತ್ಸ್ನಾ ಕ್ವಾಡ್ರಸ್ (28) ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಕಳೆದ 6 ವರ್ಷಗಳಿಂದ ಹೆಝಲ್ ಅಲ್ ಮಿಕ್ವಾ ಜನರಲ್ ಎಂಬ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಜು.19ರಂದು ಪತಿಯೊಂದಿಗೆ ಅಶ್ವಿನ್ ಮಥಾಯಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು. ನಂತರ ಹೆಝಲ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅದಾಗಿ ಎರಡು ದಿನಗಳ ಬಳಿಕ ಅವರ ಸಹೋದ್ಯೋಗಿಯೊಬ್ಬರು ಮಹಿಳೆ ಸಾವನ್ನಪ್ಪಿದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಸಾವು ಹೇಗೆ ಸಂಭವಿಸಿದೆ ಮತ್ತು ಯಾವಾಗ ಸಂಭವಿಸಿದೆ ಎಂಬ ಬಗ್ಗೆ ಪತಿ ಅಶ್ವಿನ್ ಗೂ ಮಾಹಿತಿ ಇಲ್ಲ.

ಸಂಬಂಧ ಅಶ್ವಿನ್, ಎಮ್ಮೆಲ್ಸಿ ಐವನ್ ಡಿಸೋಝಾ ಮತ್ತು ಉಡುಪಿ ಶಾಸಕ ರಘುಪತಿ ಭಟ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಸಂಪರ್ಕಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರಿಗೂ ಮಾಹಿತಿ ನೀಡಲಾಗಿದ್ದು, ಮುಂದಿನ ಪ್ರಕ್ರಿಯೆಗೆ ಪ್ರಯತ್ನ ನಡೆಯುತ್ತಿದೆ. (ಎಂ.ಎನ್)

Leave a Reply

comments

Related Articles

error: