ಮೈಸೂರು

ಟೆರೆಶಿಯನ್ ಕಾಲೇಜಿನಲ್ಲಿ ಕಳವಿಗೆ ಯತ್ನ

theft-2ಮೈಸೂರಿನ ಟೆರೆಶಿಯನ್ ಕಾಲೇಜಿನೊಳಗೆ ನುಗ್ಗಿದ ದುಷ್ಕರ್ಮಿಗಳು ಕಡತಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿ ಕಳುವಿಗೆ ಯತ್ನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ ನಜರಾಬಾದ್ ನ ಟೆರೆಶಿಯನ್ ಕಾಲೇಜಿನೊಳಗೆ ನುಗ್ಗಿದ ದುಷ್ಕರ್ಮಿಗಳು ಕಾಲೇಜಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾಗಳನ್ನು ಸ್ಥಗಿತಗೊಳಿಸಿ ಕೆಲವು ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಬೀರುವಿನ ಬಾಗಿಲನ್ನು ತೆರೆದ ದುಷ್ಕರ್ಮಿಗಳು ಅದರಲ್ಲಿರಿಸಲಾಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಕಾಲೇಜಿನ ಕಡತಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜಿನ ಪೀಠೋಪಕರಣಗಳನ್ನೂ ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ನಜರಾಬಾದ್ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿರುವುದೇ ಅಥವಾ ಯಾವುದಾದರೂ ಮಹತ್ವದ ದಾಖಲೆಗಳನ್ನು ಪಡೆಯಲು ಬಂದಿದ್ದರೇ ಎನ್ನುವುದು ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.

 

Leave a Reply

comments

Related Articles

error: