
ಪ್ರಮುಖ ಸುದ್ದಿ
ಮಾನಸಿಕವಾಗಿ ನೊಂದ ಸ್ವಾಮೀಜಿ ಬಾವಿಗೆ ಹಾರಿ ಆತ್ಮಹತ್ಯೆ
ರಾಜ್ಯ(ಹುಬ್ಬಳ್ಳಿ)ಜು.27:- ಮಾನಸಿಕವಾಗಿ ನೊಂದ ಯುವ ಸ್ವಾಮೀಜಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
30ರ ವಯಸ್ಸಿನ ಶಿವಮೂರ್ತಿ ಶಿವಮಠ ಆತ್ಮಹತ್ಯೆಗೆ ಶರಣಾದ ಸ್ವಾಮೀಜಿಯಾಗಿದ್ದು, ಹುಬ್ಬಳ್ಳಿಯ ಮಂಟೂರು ರಸ್ತೆಯ ಕಲಬುರ್ಗಿಮಠದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಮಠದಲ್ಲಿ ಪೂಜಾರಿಯಾಗಿದ್ದ ಶಿವಮೂರ್ತಿ ಅವರು, ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಇಂದು ಬಾವಿಯಲ್ಲಿ ಶವವಾಗಿ ಶಿವಮೂರ್ತಿ ಸ್ವಾಮೀಜಿ ಪತ್ತೆಯಾಗಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)