ಸುದ್ದಿ ಸಂಕ್ಷಿಪ್ತ

ನಾಳೆ ಶ್ರೀರಾಮಾನುಜ ಸಹಸ್ರಮಾನೋತ್ಸವ ಸಂಗೀತ ಕಛೇರಿ

ಮೈಸೂರು,ಜು.27 : ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್, ರಾಮಾನು ಸೇವಾ ಪ್ರತಿಷ್ಠಾನ ಸಂಯುಕ್ತವಾಗಿ ಶ್ರೀ ರಾಮಾನುಜ ಸಹಸ್ರಮಾನೋತ್ಸವ ಸಂಗೀತ ಕಾರ್ಯಕ್ರಮವನ್ನು ಜು.28ರ ಸಂಜೆ 5.15ಕ್ಕೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ಶಾರದಾ ವಿಲಾಸ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಅಧ್ಯಕ್ಷತೆ ವಹಿಸುವರು, ವಿದ್ವಾನ್ ಮೈಸೂರು ವಿ.ವಂಶೀಧರ್ ಅವರಿಂದ ವೇಣುವಾದನ. ವಿದ್ವಾನ್ ಎಸ್.ಪಿ.ಅನಂತ ಪದ್ಮನಾಭ ಪಿಟೀಲು, ಮೃದಂಗದಲ್ಲಿ ವಿದ್ವಾನ್ ಕೋವಿಲಡಿ ಮಧ್ವ ಪ್ರಸಾದ್, ಖಂಚಿರದಲ್ಲಿ ವಿದ್ವಾನ್ ಆರ್.ಕಾರ್ತಿಕ್ ಸಾಥ್ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: