ಕರ್ನಾಟಕಮೈಸೂರು

ದಸರಾ ಆನೆ ನಡೆಸುವ ಮಾವುತ ಅಸ್ವಸ್ಥ: ಜಿಲ್ಲಾಡಳಿತ ಆತಂಕ

ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆ ‘ಹರ್ಷ’ನ ಮಾವುತ ಸಿಕ್ಕಿ ಎಂಬುವರು ಬುಧವಾರ ಮಧ್ಯಾಹ್ನ ಅರಮನೆ ಆವರಣದಲ್ಲಿ ಪ್ರಜ್ಞಾಹೀನರಾಗಿ ನೆಲಕ್ಕುರುಳಿದ ಘಟನೆ ನಡೆದಿದೆ.

ಮಾವುತರ ಕುಟುಂಬ ಅರಮನೆಯ ಸಮೀಪ ನಿರ್ಮಿಸಿದ ಶೆಡ್ಡೊಂದರಲ್ಲಿ ವಾಸಿಸುತ್ತಿದೆ. ಮಾವುತ ಸಿಕ್ಕಿ ಅವರು ಕುಸಿದು ಬಿದ್ದುದನ್ನು ನೋಡಿ ಆನೆಗಳು ಗಾಬರಿಗೊಂಡಿವೆ. ‘ಹರ್ಷ ಆನೆಯು ಸಿಕ್ಕಿ ಅವರನ್ನು ಬಿಟ್ಟು ಬೇರೆ ಯಾರನ್ನೂ ತನ್ನ ಬಳಿ ಬರಲು ಬಿಡುವುದಿಲ್ಲ. ಅದರಿಂದ ಸಿಕ್ಕಿ ದಸರಾ ಉತ್ಸವಕ್ಕೆ ಮುನ್ನ ಚೇತರಿಸಿಕೊಳ್ಳುವುದು ಅಗತ್ಯವಾಗಿದೆ. ಸಿಕ್ಕಿ ಅವರು ಚೇತರಿಸಿಕೊಳ್ಳದಿದ್ದಲ್ಲಿ ಹರ್ಷ ದಸರಾದಲ್ಲಿ ಪಾಲ್ಗೊಳ್ಳುವುದು ಅನುಮಾನ. ಇದರಿಂದ ಕುಟುಂಬ ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿದೆ. ಜಿಲ್ಲಾಡಳಿತ ಸಿಕ್ಕಿಯ ಆರೋಗ್ಯದತ್ತ ಗಮನ ನೀಡಿದ್ದು, ಸದ್ಯದಲ್ಲಿಯೇ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.

Leave a Reply

comments

Related Articles

error: