
ಮೈಸೂರು
ಕೇಂದ್ರ ಸರ್ಕಾರದ ಜನೌಷಧಿ ಯೋಜನೆಯಡಿ ಸ್ಯಾನಿಟರಿ ನಾಪ್ಕಿನ್ ವಿತರಣೆಗೆ ಚಾಲನೆ
ಮೈಸೂರು,ಜು.28:- ಕೇಂದ್ರ ಸರ್ಕಾರದ ಜನೌಷಧಿ ಯೋಜನೆಯಡಿ ಸ್ಯಾನಿಟರಿ ನಾಪ್ಕಿನ್ ವಿತರಣೆಗೆ ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ ರಾಮದಾಸ್ ಅವರು ಚಾಲನೆ ನೀಡಿದರು.
ಚಾಮುಂಡಿಪುರಂ ಬಳಿ ಇರುವ ಆರಾಧ್ಯ ಸಭಾಂಗಣದಲ್ಲಿ ನೂರಾರು ಮಹಿಳೆಯರಿಗೆ ಹಾಗೂ ವಿವಿಧ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ ರಾಮದಾಸ್ ಉಚಿತವಾಗಿ ಸ್ಯಾನಿಟರಿ ನಾಪ್ಕಿನ್ ವಿತರಣೆ ಮಾಡಿದರು. ಕೇಂದ್ರ ಸರ್ಕಾರದ ಯೋಜನೆಯಡಿ ದೇಶಾದ್ಯಂತ 4 ಸಾವಿರ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನಾಪ್ಕಿನ್ ಕಡಿಮೆ ದರದಲ್ಲಿ ಸಿಗಲಿದೆ. ಹಾಗೆಯೇ ಮೈಸೂರಿನ 27 ಜನೌಷಧಿ ಕೇಂದ್ರಗಳಲ್ಲೂ ಭಾರೀ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನಾಪ್ಕಿನ್ ದೊರೆಯಲಿದೆ . ಕೇವಲ 2.50 ರೂ ಗಳಲ್ಲಿ ಸ್ಯಾನಿಟರಿ ನಾಪ್ಕಿನ್ ದೊರೆಯಲಿದ್ದು , ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಇದು ಸಹ ಒಂದಾಗಿದೆ. (ಕೆ.ಎಸ್,ಎಸ್.ಎಚ್)