ಕರ್ನಾಟಕ

ಶ್ರೀ ವೆಂಕಟರಮಣ ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಗೆ ಬೆಳ್ಳಿಯ ಹೊದಿಕೆ ಸಮರ್ಪಣೆ

ರಾಜ್ಯ(ಮಂಗಳೂರು)ಜು.28:- ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಒಳ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಗೆ ಬೆಳ್ಳಿಯ ಹೊದಿಕೆಯನ್ನು ಸಮರ್ಪಿಸಲಾಯಿತು.

ಗುರುಪುರ ಪೇಟೆ ಶೆಣೈ ಕುಟುಂಬದ ಪರವಾಗಿ ಲಕ್ಷ್ಮೀದೇವಿ ಮತ್ತು ಗುರುಪುರ ಗುಂಡ ಯಾನೆ ದಾಮೋದರ ಶೆಣೈ ಮಂಗಳೂರು ಇವರ ಸ್ಮರಣಾರ್ಥ ಲತಿಕಾ ಮತ್ತು ಲೆಕ್ಕ ಪರಿಶೋಧಕ ಗುರುಪುರ ಹರಿರಾಮ್ ಶೆಣೈ ಕುಟುಂಬದ ವತಿಯಿಂದ ಸೇವಾರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸಲಾಯಿತು. ಸಮರ್ಪಣಾ ಕಾರ್ಯಕ್ರಮದ ವೈದಿಕ ಪೂಜಾ ವಿಧಿವಿಧಾನಗಳನ್ನು ದೇವಳದ ಪಂಡಿತ್ ನರಸಿಂಹ ಆಚಾರ್ಯ ನೆರವೇರಿಸಿದರು. ದೇವಳದ ಮೊಕ್ತೇಸರರಾದ ಎಂ. ಪದ್ಮನಾಭ ಪೈ, ಜಯರಾಜ್ ಪೈ, ಅಡಿಗೆ ಕೃಷ್ಣ ಶೆಣೈ ಹಾಗೂ ನೂತನ ಮೊಕ್ತೇಸರರಾಗಿ ಆಯ್ಕೆಯಾದ ಸಿ. ಎಲ್.ಶೆಣೈ, ಕೆ. ಪಿ.ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಪ್ರಧಾನ ಅರ್ಚಕರಾದ ಚಂದ್ರಕಾಂತ್ ಭಟ್, ಬೆಳ್ಳಿಯ ಕಸೂರಿ ಕೆಲಸ ಮಾಡಿದ ಕೆನರಾ ಜ್ಯೂವೆಲ್ಸ್ ಮಾಲಕರಾದ ಧನಂಜಯ ಪಾಲ್ಕೆ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: