ಪ್ರಮುಖ ಸುದ್ದಿಮೈಸೂರು

60ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ: ವಿವಿಧ ಸ್ಪರ್ಧೆ

police-web2ಮೈಸೂರಿನಲ್ಲಿ ಡಿಸೆಂಬರ್ 19 ರಿಂದ 23 ರ ವರೆಗೆ 60ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ ನಡೆಯಲಿದ್ದು, ದೇಶದ 31 ರಾಜ್ಯಗಳಿಂದ 32 ತಂಡಗಳು ಪಾಲ್ಗೊಳ್ಳಲಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದರು.

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡಮಿಯ ಓಲ್ಡ್ ಆಡಿಟೋರಿಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರರಾವ್, 6ನೇ ಬಾರಿ ಕರ್ನಾಟಕದಲ್ಲಿ ಪೊಲೀಸ್ ಕರ್ತವ್ಯ ಕೂಟ ನಡೆಯುತ್ತಿದೆ. ಪೊಲೀಸ್ ತಂಡದ ಜೊತೆ 140 ಶ್ವಾನದಳಗಳು ಪಾಲ್ಗೊಳ್ಳಲಿವೆ. ಪೊಲೀಸರಿಗೆ ಇಲ್ಲಿ ಇನ್ವೆಸ್ಟಿಗೇಶನ್, ಫೊರೆನ್ಸಿಕ್ ಟೆಸ್ಟ್, ಬಾಂಬ್ ನಿಷ್ಕ್ರಿಯಗೊಳಿಸುವಿಕೆ ಕುರಿತು ಸ್ಪರ್ಧೆ ನಡೆದರೆ, ಶ್ವಾನಗಳಿಗೆ ಬಾಂಬ್ ಪತ್ತೆ ಹಚ್ಚುವಿಕೆ ಕುರಿತಂತೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪೊಲೀಸ್ ಸಿಬ್ಬಂದಿ, ಎಸ್ಸೈಗಳು, ಇನ್ಸ್ಸ್ಪೆಕ್ಟರ್ಗಳು ಭಾಗವಹಿಸಲಿದ್ದಾರೆ. ಆದರೆ ಉನ್ನತಾಧಿಕಾರಿಗಳು ಭಾಗವಹಿಸುವಂತಿಲ್ಲ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿಗೆ ಸೈಬರ್ ಕ್ರೈಂ ಕುರಿತಂತೆ ಯಾವ ರೀತಿ ಕೇಸ್ ನೋಂದಣಿ ಮಾಡಬೇಕು. ಯಾವ ರೀತಿ ತನಿಖೆ ಮಾಡಬೇಕು ಎನ್ನುವುದನ್ನು ತರಬೇತಿಯ ಮೂಲಕ ಕಂಪ್ಯೂಟರ್ ಬಳಸಿಕೊಂಡು ವಿವರಣೆ ನೀಡಲಾಗುವುದು ಎಂದರು.

ಡಿಸೆಂಬರ್ 19 ರಂದು ಸಂಜೆ 4 ಗಂಟೆಗೆ ರಾಜ್ಯಪಾಲ ವಜೂಭಾಯಿ ರೂಡಾಭಾಯಿ ವಾಲಾ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು. ಡಿಸೆಂಬರ್ 22ರಂದು ಬಡಾಖಾನಾ ಆಯೋಜಿಸಲಾಗಿದ್ದು, ಅದರಲ್ಲಿ ವಿವಿಧ ರಾಜ್ಯಗಳ ತರಹೇವಾರಿ ಆಹಾರಗಳನ್ನು ತಯಾರಿಸಲಾಗುತ್ತಿದ್ದು, ವಿಶೇಷ ಊಟವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 24 ಲಕ್ಷ ರೂಪಾಯಿ ಹಾಗೂ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿಗಳನ್ನು ನೀಡಿದೆ ಎಂದು ತಿಳಿಸಿದರು.

ಡಿಸೆಂಬರ್ 23 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲ್ಗೊಳ್ಳಲಿದ್ದಾರೆ. 22 ಜನರಿಗೆ ಪ್ರೈಮ್ ಮಿನಿಸ್ಟರ್ ಲೈಫ್ ಸೇವಿಂಗ್ ಪ್ರಶಸ್ತಿಯನ್ನು ಸಿದ್ದರಾಮಯ್ಯ ಪ್ರದಾನಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಎ ನಿರ್ದೇಶಕ ವಿಫುಲ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು. ಕರ್ತವ್ಯಕೂಟಕ್ಕಾಗಿ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ.

Leave a Reply

comments

Related Articles

error: