ಮೈಸೂರು

ಅರ್ಥಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಾಗಾರ.30.

ಮೈಸೂರು,ಜು.28 : ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರುಗಳಿಗೆ ತರಬೇತಿ ಕಾರ್ಯಾಗಾರವನ್ನು ಜು.30 ರಿಂದ ಆ.5ರವರೆಗೆ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಪ.ಪೂ.ಶಿ.ಇ ಉಪನಿರ್ದೇಶಕ ಡಾ.ದಯಾನಂದ ಅಧ್ಯಕ್ಷತೆ. ಮಹಾಜನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಉದ್ಘಾಟಿಸುವರು. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್,  ಮಹಾರಾಜ ವಿಭಜಿತ ಪ.ಪೂಕಾ ಪ್ರಾಚಾರ್ಯ ಬಿ.ಎಸ್.ಆಗದೀಶ್ , ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ ಇನ್ನಿತರರು ಪಾಲ್ಗೊಳ್ಳುವರು.

ಕಾರ್ಯಗಾರದಲ್ಲಿ ಹಲವಾರು ಪ್ರಾಚಾರ್ಯರು, ವಿಶ್ರಾಂತ ಪ್ರಾಚಾರ್ಯರು, ಹಿರಿಯ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿ ತರಬೇತಿ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: