ಪ್ರಮುಖ ಸುದ್ದಿಮೈಸೂರು

ವಿಮಾನ ನಿಲ್ದಾಣ ರನ್ ವೇ ಕಾಮಗಾರಿ ಆರಂಭಿಸಬೇಕು: ಬೇಕಾದ ಜಾಗ ವಶ ಪಡಿಸಿಕೊಳ್ಳಿ : ಅಧಿಕಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ  ಸೂಚನೆ

ಮೈಸೂರು,ಜು.29:-  ಮೈಸೂರು ವಿಮಾನ ನಿಲ್ದಾಣದ ಶೀಘ್ರ ರನ್ ವೇ ವಿಸ್ತೀರ್ಣಕ್ಕೆ ಬೇಕಾದ ಜಾಗವನ್ನು ವಶ ಪಡಿಸಿಕೊಳ್ಳಿ ಎಂದು ಮಂಡಕಳ್ಳಿ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸಚಿವ ಜಿ.ಟಿ ದೇವೇಗೌಡ ಸೂಚನೆ ನೀಡಿದರು.

ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಜತೆ ನಿನ್ನೆ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ ಮೈಸೂರು ವಿಮಾನ ನಿಲ್ದಾಣದ ಶೀಘ್ರ ರನ್ ವೇ ವಿಸ್ತೀರ್ಣ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ  ನೀಡಿದರು. ಜನವರಿ ಅಂತ್ಯದೊಳಗೆ ರನ್ ವೇ ಕಾಮಗಾರಿ ಆರಂಭಿಸಬೇಕು. ಕೂಡಲೇ ಅಧಿಕಾರಿಗಳು ರನ್ ವೇ ವಿಸ್ತೀರ್ಣಕ್ಕೆ ಬೇಕಾದ ಜಾಗವನ್ನು ವಶಪಡಿಸಿಕೊಳ್ಳಿ. ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಒಟ್ಟು 286 ಎಕರೆ ಜಾಗದ ಅವಶ್ಯಕತೆ ಇದೆ. ಈಗಾಗಲೇ 180ಎಕರೆ ಜಾಗವನ್ನು ಫೈನಲ್ ನೋಟಿಫಿಕೇಶನ್ ಆಗಿದ್ದು, ಉಳಿದ 78ಎಕರೆ ಜಾಗ ಫೈನಲ್ ನೋಟಿಫಿಕೇಶನ್ ಹಂತದಲ್ಲಿದೆ. ಆದ್ದರಿಂದ ಮತ್ತೊಮ್ಮೆ ಜಂಟಿ ಸರ್ವೆ ಮಾಡಲು ಸಚಿವ ಜಿ.ಟಿ ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರಿನಲ್ಲಿ ಉದ್ಯೋಗಾವಕಾಶ ಕಡಿಮೆ ಎನ್ನುವ ಮಾತು ಕೇಳಿ ಬರುತ್ತೆ. ಅದಕ್ಕಾಗಿಯೇ ಸಾರಿಗೆ ಸಂಪರ್ಕಕ್ಕೆ  ಹೆಚ್ಚು ಒತ್ತು ನೀಡಿದ್ದೇವೆ. ಸಾರಿಗೆ ಸಂಪರ್ಕ ಅಭಿವೃದ್ಧಿ ಗೊಂಡರೆ  ಕೈಗಾರಿಕಾ ಉದ್ಯಮಗಳು  ಹೆಚ್ಚಾಗಲಿವೆ. ಆಗ ಉದ್ಯೋಗ ಸಮಸ್ಯೆ ನೀಗಲಿದೆ, ಸದ್ಯಕ್ಕೆ ಮೈಸೂರು -ಬೆಂಗಳೂರು 10 ಪಥದ ರಸ್ತೆ ನಿರ್ಮಾಣವಾಗಲಿದೆ, ಆಗ ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿಗೆ ತಲುಪಬಹುದು ಎಂದು ಸಚಿವರು ತಿಳಿಸಿದರು. ಸದ್ಯ ವಿಮಾನ ಸಾರಿಗೆ ವ್ಯವಸ್ಥೆಯೊಂದೇ ಮೈಸೂರಿನಲ್ಲಿ ಬಾಕಿ ಉಳಿದಿರುವುದು, ವಿಮಾನ ಅಭಿವೃದ್ಧಿ ಕೈಗೊಂಡರೆ ಹೆಚ್ಚು ಕೈಗಾರಿಕಾ ಕೇಂದ್ರ ಸ್ಥಾಪನೆಯಾಗುತ್ತದೆ, ವಿಮಾನ ಹಾರಾಟ  ಹೆಚ್ಚಾದ ನಂತರ ಬೆಂಗಳೂರಿಗಿಂತ ಮೈಸೂರು ವಿಮಾನ ನಿಲ್ದಾಣ ಹೆಚ್ಚು ವ್ಯಾವಹಾರಿಕವಾಗಿ  ಬೆಳೆಯಲಿದೆ  ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: