ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿ : ಐವರ ಬಂಧನ

ಮೈಸೂರು,ಜು.29:-  ವೇಶ್ಯಾವಾಟಿಕೆ ನಡೆಸುತ್ತಿದ್ದ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿ ನಡೆಸಿ ಏಳು ಯುವತಿಯರನ್ನು ರಕ್ಷಿಸಿ ಐವರು ಪುರುಷರನ್ನು ಬಂಧಿಸಿದ ಘಟನೆ ವಿಜಯನಗರದಲ್ಲಿ ನಡೆದಿದೆ.

ದಾಳಿ ವೇಳೆ ಬ್ಲೂ ಫಿಲಂ ತೆಗೆಯುತ್ತಿದ್ದ ವಿಚಾರ ಬಹಿರಂಗವಾಗಿದೆ. ವಿಜಯನಗರ ವಾಟರ್ ಟ್ಯಾಂಕ್ ಬಳಿ ಇರುವ ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆಸಿದ ಪೊಲೀಸರು ಒಂದು ಕಾರು ಹಾಗೂ ಮೂರು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಪೊಲೀಸರು ವಿಚಾರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ದಂದೆ ನಡೆಸುತ್ತಿದ್ದ ಮುಖ್ಯಸ್ಥೆ ಬ್ಲೂ ಫಿಲಂ ಚಿತ್ರೀಕರಣ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದು, ಯುವತಿಯರ ಬ್ಲೂ ಫಿಲಂ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ ದಂಧೆಗೆ ಬಳಸಿಕೊಳ್ಳುತ್ತಿದ್ದ ರು  ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: