ದೇಶ

ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್: ಭಾರತದ ಪರ ಚಿನ್ನ ಗೆದ್ದ ಐವರು

ಮುಂಬೈ,ಜು.30-ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಐವರು ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಯಾಡ್ ನ 21 ವರ್ಷದ ಇತಿಹಾಸದಲ್ಲಿ ಭಾರತ ತಂಡದ ಎಲ್ಲರೂ ಚಿನ್ನದ ಪದಕ ಜಯಿಸಿದ್ದು ಇದೇ ಮೊದಲು.

ಪೋರ್ಚುಗಲ್ ಲಿಸ್ಬಾನ್ನಲ್ಲಿ ನಡೆದ ಒಲಿಂಪಿಯಾಡ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮುಂಬೈನ ಭಾಸ್ಕರ್ ಗುಪ್ತಾ, ಕೋಟಾದ ಲೇ ಜೈನ್, ರಾಜಕೋಟ್ ನಿಶಾಂತ್ ಅಭಂಗಿ, ಜೈಪುರದ ಪವನ್ ಗೋಯಲ್ ಮತ್ತು ಕೊಲ್ಕತ್ತಾದ ಸಿದ್ಧಾರ್ಥ ತಿವಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

 ಭಾಗವಹಿಸಿದ್ದ 86 ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಚೀನಾ ಮಾತ್ರ ಗರಿಷ್ಠ ಚಿನ್ನದ ಪದಕ ಗೆದ್ದ ದೇಶವಾಗಿದೆ. ವಿಶ್ವದ ವಿವಿಧ ದೇಶಗಳಿಂದ 396 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ 42 ಚಿನ್ನದ ಪದಕಗಳನ್ನು ಎರಡು ಹಂತಗಳ ಸ್ಪರ್ಧೆ ಬಳಿಕ ವಿವಿಧ ದೇಶಗಳ ವಿದ್ಯಾರ್ಥಿಗಳು ಗೆದ್ದರು.

ಬಾರಿ ಭಾರತದ ಸ್ಪರ್ಧಿಗಳು ಅದ್ಭುತ ಸಾಧನೆ ಮಾಡಿದ್ದಾರೆ. 1998ರಿಂದ ನಾವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ. ತಂಡದ ಎಲ್ಲ ಸದಸ್ಯರೂ ಚಿನ್ನ ಗೆದ್ದಿರುವುದು ಇದೇ ಮೊದಲು. ಮುನ್ನ ಮೂರು ಬಾರಿ ನಾಲ್ಕು ಚಿನ್ನದ ಪದಕ ಗೆದ್ದಿದ್ದೆವು ಎಂದು ಭಾರತದ ತಂಡದ ನೇತೃತ್ವ ವಹಿಸಿದ್ದ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರದ ಪ್ರವೀಣ್ ಪಾಠಕ್ ಹೇಳಿದ್ದಾರೆ.

ಜೈನ್ ಮತ್ತು ಗೋಯಲ್ ಅವರು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಗ್ರ 10 ರ್ಯಾಂಕಿಂಗ್ನಲ್ಲಿ ಸೇರಿದ್ದಾರೆ. ಮೂವರು ಮುಂಬೈ ಐಐಟಿ ಸೇರಿದ್ದರೆ, ಜೈನ್ ಅಮೆರಿಕಾದ ಎಂಐಟಿಯಲ್ಲಿ ಕಂಪ್ಯೂಟರ್ ವಿಜ್ಞಾನ ಹಾಗೂ ಭೌತಶಾಸ್ತ್ರದ ಜಂಟಿ ಕೋರ್ಸ್ ಸೇರಿದ್ದಾರೆ. ತಂಡದಲ್ಲಿ ಅತ್ಯಂತ ಕಿರಿಯರಾಗಿದ್ದ ಅಭಂಗಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜೆಇಇ (ಅಡ್ವಾನ್ಸ್ಡ್)ಗೆ ಸಜ್ಜಾಗುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: