ಮೈಸೂರು

ಕುರುಬ ಸಮುದಾಯ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ: ಹೆಚ್. ವಿಶ್ವನಾಥ

ಮೈಸೂರಿನ ಕುವೆಂಪುನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಭಾನುವಾರ ಕನಕದಾಸರ 529ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶ್ರೀಕನಕದಾಸ ನೌಕರರ ಸಂಘ ವತಿಯಿಂದ ನಡೆದ ಕನಕ ಜಯಂತ್ಯೋತ್ಸವವನ್ನು ಕಾಗಿನೆಲೆ ಕನಕಗುರುಪೀಠ ಶಾಖಾ ಮಠದ ಶಿವಾನಂದಪುರಿ ಮಹಾಸ್ವಾಮಿಗಳು ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಮಾತನಾಡಿ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸೇರಿದರೆ ಕುರುಬ ಜನಾಂಗದವರು ಸುಮಾರು ಹನ್ನೆರಡು ಕೋಟಿಯಷ್ಟಿದ್ದಾರೆ. ಕುರುಬ ಸಮುದಾಯದಲ್ಲೂ ಬೇರೆ, ಬೇರೆ ಪಂಗಡಗಳಿವೆ ಎಂದು ತಿಳಿಸಿದರು.

ಕುರುಬ ಸಮುದಾಯವೂ ಸಹ ಮುಂದಿನ ದಿನಗಳಲ್ಲಿ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ. ಕನಕದಾಸರು ಓರ್ವ ಸಂತರಾಗಿದ್ದು ಜಗತ್ತಿಗೆ ಸೌಹಾರ್ದತೆ ಹಾಗೂ ಏಕತೆಯ ಸಂದೇಶವನ್ನು ಸಾರಿದರು. ಮಹಾತ್ಮಾಗಾಂಧಿಯವರೂ ಸಹ ಕನಕದಾಸರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ ಕನಕದಾಸರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ಸದಸ್ಯ ಕೆ. ಮರೀಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: