ಮೈಸೂರು

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂದೆ ಹಿನ್ನೆಲೆ : ಎಚ್ಚೆತ್ತ ಪಾಲಿಕೆ ಅಧಿಕಾರಿಗಳಿಂದ ದಾಳಿ,ಪರಿಶೀಲನೆ

ಮೈಸೂರು,ಜು.30:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬ್ಯೂಟಿ ಪಾರ್ಲರ್  ಹೆಸರಲ್ಲಿ ವೇಶ್ಯಾವಾಟಿಕೆ ದಂದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಹಲವು ಬ್ಯೂಟಿ ಪಾರ್ಲರ್, ಸ್ಪಾಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಹಲವು ಬ್ಯೂಟಿ ಪಾರ್ಲರ್ , ಸ್ಪಾ ಸೆಂಟರ್ ಗಳಿಗೆ ದಿಢೀರ್ ದಾಳಿ ನಡೆಸಿದ ಪಾಲಿಕೆಯ ಅಧಿಕಾರಿಗಳು ಪಾರ್ಲರ್ ಪರವಾನಿಗೆ ಸೇರಿದಂತೆ ಬ್ಯೂಟಿಷಿಯನ್ಸ್ ವಿದ್ಯಾರ್ಹತೆ ಬಗ್ಗೆ ಪರಿಶೀಲನೆ ನಡೆಸಿದರು. ಪಾರ್ಲರ್ ನಡೆಸಲು ಬೇಕಾಗಿರುವ ವ್ಯವಸ್ಥೆಗಳನ್ನು  ಪರಿಶೀಲನೆ ನಡೆಸಿದರು.ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜು ನೇತೃತ್ವದಲ್ಲಿ ದಾಳಿ ನಡೆದಿದೆ.  ಈ ಕುರಿತು ಮಾತನಾಡಿದ ಡಾ.ನಾಗರಾಜ್  ನಗರದಲ್ಲಿ ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.ಮುಂದಿನ ದಿನಗಳಲ್ಲಿ ಎಲ್ಲಾ ಸ್ಪಾ ಸೆಂಟರ್ ಗಳನ್ನು ಪರಿಶೀಲನೆ ಮಾಡಲಾಗುತ್ತದೆ.ಅಗತ್ಯ ಕ್ರಮ ವಹಿಸದ ಸ್ಪಾ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: