ಮೈಸೂರು

‘ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ : ಮಹೇಶಾತ್ಮಾನಂದ ಮಹಾರಾಜ್

ಮೈಸೂರು, ಜು.30:-‘ನಾನು ಈ ಪದಗ್ರಹಣದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ, ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ’ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಮಹೇಶಾತ್ಮಾನಂದ ಮಹಾರಾಜ್‍ ಅವರು ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ಚಂದನ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ವಲಯ-1, ಕ್ಷೇತ್ರ-10 2018-19ರ ನೂತನ ಅಧ್ಯಕ್ಷ ಲಯನ್ ಜಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದರು. ಚೆಂದದ ಹೆಸರು ‘ಚಂದನ’, ವಿವೇಕಾನಂದರ ವಾಣಿಯಂತೆ ಒಳ್ಳೆಯದನ್ನು ಮಾಡು, ಒಳ್ಳೆಯವನಾಗು. ಮನಸ್ಸಿನಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ಆಲೋಚನೆ ಬಂದರೆ ನಮಗೆ ಸಿಂಹ ಬಲ ಬಂದಂತಾಗುತ್ತದೆ. ನೀವು ಫುಟ್‍ಬಾಲ್ ಆಟ ಆಡಿ ನಿಮ್ಮ ದೇಹ, ಮನಸ್ಸು ಸದೃಢವಾದಾಗ ಭಗವದ್ಗೀತೆ ಓದಿ. ಧರ್ಮ ಕ್ಷೇತ್ರೇ ಕುರು ಕ್ಷೇತ್ರೇ ಯಾವುದೇ ಕ್ಷೇತ್ರಕ್ಕೆ ಹೋಗುತ್ತೀರೋ ಅಲ್ಲಿ ಧರ್ಮ ಅನುಸರಿಸಿ. ಕತ್ತಲೆ ಇದೆ ನಿಜ. ಸಣ್ಣ ಸಣ್ಣ ಹಣತೆ ಹಚ್ಚಿ. ತಂದೆ, ತಾಯಿ, ಗುರುಗಳನ್ನು ಮೆರೆಯಬೇಡಿ ಎಂದು ಸ್ವಾಮೀಜಿ ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಪದಗ್ರಹಣ ನೆರವೇರಿಸಿದ ಒಂದನೇ ಉಪ ಜಿಲ್ಲಾ ರಾಜ್ಯಪಾಲ ನಾಗರಾಜ್ ವಿ.ಬೈರಿ ಮಾತನಾಡಿ, ನಾನು ಕಳೆದ ನಾಲ್ಕು ವರ್ಷದಿಂದ ಈ ಕ್ಲಬ್ಬಿನೊಡನೆ ನಿಕಟ ಸಂಪರ್ಕ ಹೊಂದಿದ್ದೇನೆ. ಯಾವುದೇ ಸಂಸ್ಥೆಯಲ್ಲಿ ವೈವಿಧ್ಯತೆ ಇಲ್ಲದಿದ್ದರೆ ಅಲ್ಲಿ ಯಶಸ್ಸು ಕಾಣಲಾಗುವುದಿಲ್ಲ. ದಾನ, ಧರ್ಮ, ಸಂಸ್ಕೃತಿಯಲ್ಲಿ ಭಾರತ ಮುಂದು. ಲಯನ್ಸ್ ಸಂಸ್ಥೆಯೂ ಹಾಗೆಯೇ ಭಾರತದಲ್ಲಿ 2,75,000 ಸದಸ್ಯರನ್ನು ಹೊಂದಿದೆ. ಸೇವೆ ಹಾಗೂ ಸತ್ಸಂಗದಿಂದ 101 ವರ್ಷ ಕಳೆದಿದ್ದೇವೆ. ಲಯನ್ಸ್ ಸಂಸ್ಥೆ 213 ದೇಶಗಳಲ್ಲಿ ಕಾರ್ಯ ನಿರ್ವಹಿಸಿ ಹೆಮ್ಮರವಾಗಿ ಬೆಳೆದಿದೆ. ಲಯನ್ಸ್ ಸಂಸ್ಥೆ ಒಂದೇ ದಿನದಲ್ಲಿ 1,60,000 ಜನರಿಗೆ ಮಧುಮೇಹ ತಪಾಸಣೆ ಮಾಡಿ ಅದು ಗಿನ್ನಿಸ್ ದಾಖಲೆಯಾಗಿದೆ. ಹೆಚ್ಚಾಗಿ ಯುವಕರನ್ನು ಹೊಂದಿರುವ ಕ್ಲಬ್ ‘ಚಂದನ’. ಈ ಕ್ಲಬ್ಬಿನಲ್ಲಿ 60 ಮಂದಿ ಸದಸ್ಯರಿದ್ದಾರೆ. ಆದರೆ ನೀವೆಲ್ಲಾ 14.5 ಲಕ್ಷ ಜನರ ನೆಟ್‍ವರ್ಕ್ ಹೊಂದಲಿದ್ದೀರಿ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಜಯರಾಮಣ್ಣ, ಸುರೇಶ್ ಬಾಬು,ನೂತನ ಅಧ್ಯಕ್ಷ ಜಿ.ಚಂದ್ರಶೇಖರ್,ನಿಕಟಪೂರ್ವ ಅಧ್ಯಕ್ಷ ರವಿ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: