
ದೇಶ
ಟ್ವೀಟರ್ ನಲ್ಲಿ 2.4 ಕೋಟಿ ಹಿಂಬಾಲಕರನ್ನು ಹೊಂದಿರುವ ಭಾರತೀಯ ಏಕೈಕ ನಟ ‘ಅಮಿತಾಭ್ ಬಚ್ಚನ್’
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಅಭಿಮಾನಿ ಹಿಂಬಾಲಕರನ್ನು ಹೊಂದಿರುವ ಭಾರತೀಯ ನಟನೆಂಬ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದ್ದಾರೆ.
74 ವರ್ಷ ವಯೋಮಾನದ ಹಿರಿಯ ನಟ ಅಮಿತಾಭ್ ಬಚ್ಚನ್ 2.4 ಕೋಟಿ ಹಿಂಬಾಲಕರನ್ನು ದಾಟಿದ್ದು ದೇಶದ ಜನಪ್ರಿಯ ತಾರೆಯಾಗಿದ್ದಾರೆ.
ಸದಸ್ಯ ಬಾಲಿವುಡ್ ಬಾದುಷಾ ಖಾನ್ಗಳಾದ ಶಾರುಖ್ ಖಾನ್ 2.27 ಕೋಟಿ, ಸಲ್ಮಾನ್ ಖಾನ್ 2.07 ಕೋಟಿ ನಟಿಯರಲಿ ದೀಪಿಕಾ ಪಡುಕೋಣೆ 1.68 ಕೋಟಿ ಇವರುಗಳನ್ನು ಹಿಂದಿಕ್ಕಿದ್ದಾರೆ.
ಟ್ವೀಟರ್ ಮೂಲಕವೇ ತಮ್ಮ ಅಭಿಮಾನಿಗಳ ಜೊತೆ ಈ ಸಂತಸವನ್ನು ಹಂಚಿಕೊಂಡಿದ್ದು “24 ಮಿಲಿಯನ್ ಅನ್ ಟ್ವಿಟರ್ ಬುಡುಂಬಾ” ಎಂದು ಟ್ವೀಟ್ ಮಾಡಿದ್ದಾರೆ.