
ಮೈಸೂರು
ಮೈಸೂರು ಎಪಿಎಂಸಿ ಚುನಾವಣೆ; ಜ.16 ರಂದು
ಮೈಸೂರು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಜ.16ರಂದು ಚುನಾವಣೆ ನಡೆಯಲಿದೆ.
ಜಿಲ್ಲೆಯ ಮೈಸೂರು, ನಂಜನಗೂಡು,ತಿ.ನರಸೀಪುರ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಸಂತೆಸರಗೂರುಗಳ ಎಪಿಎಂಸಿ ಚುನಾವಣೆಯ ಪೂರ್ವ ತಯಾರಿ ನಡೆದಿದ್ದು, ಡಿ.27ರಂದು ಚುನಾವಣಾ ಅಧಿಸೂಚನೆ ಹೊರಬೀಳಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಡಿ.27, ನಾಮಪತ್ರ ಸಲ್ಲಿಸಲು ಆರಂಭ, ಜ.3ರಂದು ಕೊನೆ ದಿನವಾಗಿದೆ. ಜ.4ರಂದು ನಾಮಪತ್ರಗಳ ಪರಿಶೀಲನೆ, ಜ.6 ನಾಮಪತ್ರ ವಾಪಸ್ ಪಡೆಯಬಹುದು. ಜ.16ರಂದು ಮತದಾನ, 18ರಂದು ಮತಗಳ ಏಣಿಕೆ ಹಾಗೂ ಫಲಿತಾಂಶ, ಜ.19ರಂದು ಚುನಾವಣಾ ಪ್ರಕ್ರಿಯೆ ಅಂತ್ಯವಾಗಲಿದೆ.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಮ 168ರ ನಿಯಮ 7ರಂತೆ ಚುನಾವಣೆ ನಡೆಯಲಿದೆ, ತಾಲೂಕಿನ ತಹಸೀಲ್ದಾರರು ಚುನಾವಣಾಧಿಕಾರಿಯಾಗಿರುವರು ಪ್ರತಿ ತಾಲ್ಲೂಕಿನಲ್ಲಿಯೂ ತಲಾ 14 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರುಗಳ ಸ್ಥಾನಗಳಿವೆ. 11 ಕೃಷಿಕರ ಕ್ಷೇತ್ರವಾಗಿದೆ, ಕಮಿಷನ್ ಏಜೆಂಟ್ ಮತ್ತು ವರ್ತಕರ ಕ್ಷೇತ್ರ, ಕೃಷಿ ಸಹಕಾರ ಮಾರುಕಟ್ಟೆ ಸಮಿತಿ ಕ್ಷೇತ್ರದಿಂದ ತಲಾ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲಾಗುವುದು.
ಮೈಸೂರು ತಾಲ್ಲೂಕಿನಲ್ಲಿ ಮಾತ್ರ ಕೃಷಿ ಸಹಕಾರ ಸಂಸ್ಕರಣ ಕ್ಷೇತ್ರದ ಚುನಾವಣೆ ನಡೆಯುವುದಿಲ್ಲ, ಇದನ್ನು ಹೊರತು ಪಡಿಸಿ 14 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದರು 13 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.