ಪ್ರಮುಖ ಸುದ್ದಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆ ನನಗೆ ನೋವು ತರಿಸಿದೆ : ಜೆಡಿಎಸ್ ನಾಯಕ ಬೆಳ್ಳುಬ್ಬಿ

ರಾಜ್ಯ(ವಿಜಯಪುರ)ಜು.31;- ಸಮ್ಮಿಶ್ರ ಸರಕಾರವು ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ ಉತ್ತರಕರ್ನಾಟಕಕ್ಕೆ ಅನ್ಯಾಯವೇನೂ ಮಾಡಿಲ್ಲ. ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಯು ನನಗೆ ನೋವು ತರಿಸಿದೆ. ಉತ್ತರ ಕರ್ನಾಟಕದ ಜನತೆ ಯಾರೂ ಕೂಡಾ ಜಾತ್ಯತೀತ ಜನತಾದಳ ಪಕ್ಷಕ್ಕೆ ಮತ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯು ತಪ್ಪಾಗಿದ್ದು, ಅವರು ಈ ರೀತಿ ಹೇಳಬಾರದಿತ್ತು ಎಂದು ಜೆಡಿಎಸ್ ನಾಯಕ ಬೆಳ್ಳುಬ್ಬಿ ಹೇಳಿದ್ದಾರೆ.

ವಿಜಯಪುರ ಅಂಬೇಡ್ಕರ್ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ಅಭಿಯಾನದ ಪ್ರತಿಭಟನೆ ನಂತರ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ವಿಷಯದಲ್ಲಿ ಸ್ವಾಮೀಜಿಗಳು ಭಾಗಿಯಾಗುವುದು ಸರಿಯಲ್ಲ. ಸ್ವಾಮೀಜಿಗಳು ತಮ್ಮ ಮಠಗಳಿಗೆ ಅನುದಾನ ಹೆಚ್ಚಿಸಲು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸ್ವಾಮಿಜಿಗಳು ಧರ್ಮ ರಕ್ಷಣೆ ಬಿಟ್ಟು ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: